News Karnataka Kannada
Monday, May 20 2024
ಮನರಂಜನೆ

ಸುದೀಪ್ ನ ಮುಂದಿನ ಚಿತ್ರ ನಿರ್ದೇಶಿಸಲಿರುವ ಕೃಷ್ಣ

Photo Credit :

ಸುದೀಪ್ ನ ಮುಂದಿನ ಚಿತ್ರ ನಿರ್ದೇಶಿಸಲಿರುವ ಕೃಷ್ಣ

ಬೆಂಗಳೂರು: ಕುಟುಂಬದೊಂದಿಗೆ ಪ್ರವಾಸ ಮುಗಿಸಿ ಬಂದಿರುವ ನಿರ್ದೇಶಕ ಕೃಷ್ಣ ಕೆಲಸಕ್ಕೆ ಹಿಂದಿರುಗಿದ್ದಾರೆ. ಅವರು ಮುಂದಿನ ಯೋಜನೆಗೆ ಅಣಿಯಾಗುತ್ತಿದ್ದು, ಮತ್ತೊಮ್ಮೆ ಸುದೀಪ್ ಅವರ ಚಿತ್ರವನ್ನು ನಿರ್ದೇಶಿಸಲಿರುವ ಯೋಜನೆಯಲ್ಲಿದ್ದಾರೆ.

ಸುದೀಪ್ ಸದ್ಯಕ್ಕೆ ಬ್ಯಾಂಗ್ಕಾಕ್ ನಲ್ಲಿ ‘ದ ವಿಲನ್’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ವಾರಾಂತ್ಯಕ್ಕೆ ಬ್ಯಾಂಗ್ಕಾಕ್ ಗೆ ತೆರಳಿ ಅಲ್ಲಿ ನಟ ಸುದೀಪ್ ಅವರನ್ನು  ಕೃಷ್ಣ ಭೇಟಿ ಮಾಡಲಿದ್ದಾರೆ. ನಿರ್ದೇಶಕ ಸದ್ಯಕ್ಕೆ ಕಥೆಗಾರರೊಂದಿಗೆ ಹೈದರಾಬಾದ್ ನಲ್ಲಿದ್ದು, ಕಥೆಯ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಸುದೀಪ್ ಅವರಿಗೆ ಆಯ್ಕೆ ಮಾಡಿಕೊಳ್ಳಲು ಕೃಷ್ಣ ಅವರ ಬಳಿ ಹಲವು ಸ್ಕ್ರಿಪ್ಟ್ ಗಳು ಇವೆಯಂತೆ. “ಈ ಬಾರಿ ಮಾಮೂಲಿತನದಿಂದ ಹೊರಬಂದು ಇಲ್ಲಿಯವರೆಗೂ ನಾನು ಪ್ರಯತ್ನಿಸದ ಚಿತ್ರಕಥೆಯನ್ನು ಹೇಳಬೇಕೆಂದಿದ್ದೇನೆ” ಎನ್ನುವ ಕೃಷ್ಣ ಹಾಸ್ಯ ಮನರಂಜನಾ ಚಿತ್ರದ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸುತ್ತಾರೆ.
ಕೃಷ್ಣ ನಿರ್ದೇಶನದ ಸುದೀಪ್ ಅಭಿನಯದ ‘ಹೆಬ್ಬುಲಿ’ ಬಾಕ್ಸ್ ಆಫಿಸ್ ನಲ್ಲಿ ಉತ್ತಮ ಗಳಿಕೆ ಕಂಡು ಯಶಸ್ವಿ ಚಿತ್ರ ಎನಿಸಿಕೊಂಡಿತ್ತು. ಆ ಯಶಸ್ಸನ್ನು ಮರುಕಳಿಸಲು ನಿರ್ದೇಶಕ ಸಿದ್ಧರಾಗುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು