ಮುಂಬೈ: ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ವಿರುದ್ಧ ನಿನ್ನೆ ಕೋವಿಡ್ -19 ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎಫ್ಐಆರ್ ದಾಖಲಿಸಲಾಗಿದೆ.
ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಮತ್ತು 269 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಸೊಹೈಲ್ ಖಾನ್ ಅವರ ಪುತ್ರ ನಿರ್ವಾನ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಅವರು ಡಿಸೆಂಬರ್ 25 ರಂದು ದುಬೈ (ಯುಎಇ) ಯಿಂದ ಹಿಂದಿರುಗಿದರು ಮತ್ತು ಹೋಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇರುವ ಬದಲು ಮನೆಗೆ ಹೋಗಿದ್ದರು. ಭಾರತಕ್ಕೆ ಬರುವ ಜನರು ತಪ್ಪದೆ 7 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು.
ಇತ್ತೀಚೆಗೆ, ಪೊಲೀಸರು ಐಪಿಸಿಯ ಸೆಕ್ಷನ್ 188 ರ ಅಡಿಯಲ್ಲಿ ಸುರೇಶ್ ರೈನಾ, ಗುರು ರಾಂಧವ, ಸುಸ್ಸೇನ್ ಖಾನ್ ಅವರಂತಹ ಪ್ರಸಿದ್ಧ 34 ಜನರ ವಿರುದ್ಧ ಸಾಮಾಜಿಕ ಅಂತರಕ್ಕೆ ಸಂಬಂಧಿಸಿದ ಕೋವಿಡ್ -19 ಮಾನದಂಡಗಳನ್ನು ಪಾಲಿಸದ ಕಾರಣ ಕ್ರಮ ಕೈಗೊಳ್ಳಲಾಗಿತ್ತು.