ಜನಪ್ರಿಯ ರಿಯಾಲಿಟಿ ಶೋ ಝೀ ಕನ್ನಡ ವಾಹಿನಿಯ ಸರಿಗಮಪ 13ನೇ ಆವೃತ್ತಿಗೆ ನಿನ್ನೆ ತೆರೆ ಬಿದ್ದಿದ್ದು, ಗದುಗಿನ ಶ್ರೀಪಂಚಾಕ್ಷರಿ ಗವಾಯಿಗಳ ಮಠದ ಶಿಷ್ಯ ಸುನೀಲ್ ವಿಜೇತರಾಗಿ ಮಿಂಚಿದ್ದಾರೆ.
ಗ್ರ್ಯಾಂಡ್ ಫಿನಾಲೆ ಸ್ಫರ್ಧೆಯಲ್ಲಿ ಶ್ರೀಹರ್ಷ, ದೀಕ್ಷಾ, ಧನುಷ್, ಸುನೀಲ್, ಅರವಿಂದ್ ಹಾಗೂ ಮೊಹಬೂಬ್ ಸಾಬ್ ಸ್ಫರ್ಧಿಸಿದ್ದು ಅಂತಿಮವಾಗಿ ಸುನೀಲ್ ವಿಜೇತರಾಗಿದ್ದು, ಮೆಹಬೂಬ್ ಸಾಬ್ ನಂತರದ ಸ್ಥಾನವನ್ನು ಅಲಂಕರಿಸಿದ್ದಾರೆ.
ವಿಜಯಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಈ ಸ್ಪರ್ಧೇಯ ತೀರ್ಪುಗಾರರಾಗಿದ್ದು, ಜೊತೆಗೆ ನಾದ ಬ್ರಹ್ಮ ಹಂಸಲೇಖ ವಿಶೇಷ ತೀರ್ಪುಗಾರರಾಗಿ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದ್ದರು.