ಮಂಗಳೂರು: ಕಳೆದ ರಾತ್ರಿ ಅರಣ್ಯದಂಚಿನ ತೋಟದಲ್ಲಿರುವ ಪಾಳು ಬಾವಿಗೆ ಕಾಡಾನೆ ಬಿದ್ದ ಘಟನೆ ಸುಳ್ಯ ತಾಲೂಕಿನ ಪೆರಾಜೆ ಸಮೀಪ ಕಲ್ಬರ್ಪೆದಲ್ಲಿ ನಡೆದಿದೆ.
ಆಯ ತಪ್ಪಿ ಬಿದ್ದಿರುವ ಸಾಧ್ಯತೆ ಇದೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೆಸಿಬಿ ಬಳಸಿ ಬಾವಿಯ ಒಂದು ಬದಿಯನ್ನು ಆಳ ಮಾಡಿ ರಕ್ಷಣಾ ಕಾರ್ಯ ಮಾಡಲಾಯಿತು. ಆನೆಯನ್ನು ಸುರಕ್ಷಿತವಾಗಿ ಮೇಲಕ್ಕೆ ತರುವ ಪ್ರಯತ್ನ ನಡೆಯಿತು.

