ಯಾದಗಿರಿ: ನವಿ ಮುಂಬೈನಲ್ಲಿ 20 ವರ್ಷದ ಯುವತಿ ಯಶಶ್ರೀ ಶಿಂಧೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ  ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.ಆಕೆಯನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿ ಪೊದೆಯಲ್ಲಿ ಶವ ಎಸೆದು ಹೋಗಿದ್ದ ಆಕೆಯ ಬಾಯ್‌ಫ್ರೆಂಡ್‌ ಶಹಾಪುರ‌ ತಾಲೂಕಿನ ಆಲ್ದಾಳ್ ಗ್ರಾಮದ 28 ವರ್ಷದ ದಾವೂದ್ ಶೇಖ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬರ್ಬರವಾಗಿ ಕೊಲೆ ಮಾಡಿದ್ದ ದಾವೋದ್‌ ಕೊಲೆ ನಂತರ ತನ್ನೂರಿಗೆ ಹಿಂದಿರುಗಿದ್ದ.

ಇನ್ನು ದಾವೂದ್‌ ಶೇಖ್‌ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಫೇಸ್‌ಬುಕ್‌ ಮೂಲಕ ಪರಿಚಯವಾಗಿ ಬಳಿಕ ಇಬ್ಬರು ಪ್ರೀತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ ಆದರೆ ಇದಕ್ಕೂ ಮೊದಲು,ಕರ್ನಾಟಕದ ಮೊಹ್ಸಿನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ನವಿ ಮುಂಬೈ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಈತ ಯಶಶ್ರೀ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಪೊಲೀಸರಿಗೆ ದೂರವಾಣಿ ಕರೆ ವಿವರಗಳಿಂದ ಸಿಕ್ಕಿದೆ. ಆರಂಭದಲ್ಲಿ ಮೊಹ್ಸಿನ್‌ ಹಾಗೂ ಯಶಶ್ರೀ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಪ್ರಮುಖ ಆರೋಪಿಯೊಂದಿಗೆ ಆತನ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಮೊಹ್ಸಿನ್‌ನನ್ನು ಇಂದು ಉರಾನ್‌ಗೆ ಕರೆತರುವ ಸಾಧ್ಯತೆಯಿದೆ.

ಶನಿವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಈ ವೇಳೆ ದೇಹದ ಮೇಲೆ ಅನೇಕ ಗಾಯದ ಗುರುತುಗಳು ಆಗಿದ್ದವು. ಅದಲ್ಲದೆ, ಚೂರಿ ಇರಿತದ ಮಾರ್ಕ್‌ಗಳು ಕೂಡ ಇದ್ದವು. ಆಕೆಯನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.ನಿನ್ನೆ ರಾತ್ರೋರಾತ್ರಿ ನಗರಕ್ಕೆ ಆಗಮಿಸಿದ ನವೀ ಮುಂಬೈನ ಅರ್ಬನ್‌ ಪೊಲೀಸ್‌ ಠಾಣೆಯ ಅಧಿಕಾರಿಗಳು ಆರೋಪಿಯನ್ನ ಬಂಧಿಸಿದ್ದಾರೆ.