News Karnataka Kannada
Friday, May 03 2024
ಕ್ಯಾಂಪಸ್

ಉಜಿರೆ: ನಮ್ಮ ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದ ಪೂರನ್ ವರ್ಮಾ

We should be proud of our culture, says Puran Varma
Photo Credit : By Author

ಉಜಿರೆ: ಜಗತ್ತಿನ ವಿವಿಧ ದೇಶಗಳಿಗೆ ಮಾದರಿಯಾಗಬಲ್ಲ ಸಾಂಸ್ಕೃತಿಕ ಹಿರಿಮೆ ಭಾರತದ್ದು ಎಂದು ಪೂರನ್ ವರ್ಮ ಅವರು ಹೇಳಿದರು.

ಅವರು ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ರತ್ನಮಾನಸ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ದಿನದ ಆಟಿದ ಗಮ್ಮತ್ತು ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಪ್ರತಿಯೊಂದು ಸಾಂಸ್ಕೃತಿಕ ಆಚರಣೆಗೂ ನಿರ್ದಿಷ್ಟ ಅರ್ಥವಿದೆ. ಈ ಕಾರಣಕ್ಕಾಗಿಯೇ ಭಾರತದ ಸಾಂಸ್ಕೃತಿಕ ಆಚರಣೆಗಳು ಜಗತ್ತಿನ ವಿವಿಧ ದೇಶಗಳನ್ನು ಸೆಳೆದಿವೆ. ಒಬ್ಬರಿಗೊಬ್ಬರು ಎದುರುಗೊಂಡಾಗ ನಮಸ್ಕರಿಸುವ ಸೌಜನ್ಯ ಇಂತದ್ದೇ ಮಾದರಿಯ ವಿಶೇಷ ಗುಣಲಕ್ಷಣ ಎಂದು ಹೇಳಿದರು.

ದಕ್ಷಿಣ ಕನ್ನಡದ ಜನತೆಗೆ ಆಟಿ ತಿಂಗಳು ಮಹತ್ವದ್ದು. ಈ ತಿಂಗಳು ಕೃಷಿಕರಿಗೆ ಚೈತನ್ಯ ನೀಡುವ ಹಲವು ಚಟುವಟಿಕೆಗಳು ನಡೆಯುತ್ತವೆ. ಈ ದೃಷ್ಟಿಯಿಂದ ದಕ್ಷಿಣ ಕನ್ನಡದ ಸಂಸ್ಕೃತಿಯು ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿಯ ಪ್ರತೀಕವಾಗುತ್ತದೆ ಎಂದರು.

ಪತ್ರಿಕೋದ್ಯಮ ವಿಭಾಗ ಹಾಗೂ ರತ್ನಮಾನಸ ಜಂಟಿಯಾಗಿ ಆಯೋಜಿಸಿದ್ದ ಈ ಆಟಿದ ಗಮ್ಮತ್ತು ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕೃಷಿ ಮತ್ತು ಗೃಹಬಳಕೆಯ ವಸ್ತುಗಳ ವಸ್ತು ಪ್ರದರ್ಶನವನ್ನು ಕೂಡ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ನಂತರ ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ತಯಾರಿಸಲಾಗುವಂತಹ ವಿಶೇಷ 14 ಖಾದ್ಯಗಳ ಸಹಿತವಾದ ಭೋಜನಕೂಟವನ್ನು ಕೂಡ ಆಯೋಜಿಸಲಾಗಿತ್ತು. ನಂತರ ಕೆಸರುಗದ್ದೆಯಲ್ಲಿ ಆಟಿದ ಕೂಟ ಎಂಬ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕೆಸರ್ಗದ್ದೆಯಲ್ಲಿ ಹಗ್ಗ ಜಗ್ಗಾಟ, ಓಟ ಇತ್ಯಾದಿ ಸ್ಪರ್ಧೆಗಳನ್ನ ಆಡಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರುಗಳು ಹಾಗೂ ರತ್ನ ಮಾನಸದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು