News Karnataka Kannada
Friday, May 03 2024
ಕ್ಯಾಂಪಸ್

ಉಜಿರೆ: ಎಸ್.ಡಿ.ಯಂ ಕಾಲೇಜಿನಲ್ಲಿ ‘ಮಾದರಿ-ಸಂಸತ್ತು’ ಕಾರ್ಯಕ್ರಮ

Model-Parliament' programme at SDM College
Photo Credit : News Kannada
ಉಜಿರೆ: ಸಂಸತ್ತಿನಲ್ಲಿ ನಡೆಯುವಂತೆ ಕಲಾಪ ಆರಂಭವಾಗಿದ್ದು, ಕಲಾಪದಲ್ಲಿ ಪ್ರಶ್ನೆಗಳು ಮರು ಪ್ರಶ್ನೆಗಳು ಚರ್ಚೆಗಳು ಆರೋಪಗಳು ಎದುರುಬದುರಾಗಿ ನೋಡುಗರ ಕಣ್ಣಿಗೆ ಸದನದ ಕಲಾಪವೇ ಸರಿ ಎಂದು ಬಿಂಬಿಸುವಂತೆ ಇತ್ತೀಚಿಗೆ ಉಜಿರೆಯ ಶ್ರೀ.ಧ.ಮ. ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ‘ಮಾದರಿ-ಸಂಸತ್ತು’ ಸಾಕ್ಷಿಯಾಯಿತು.
ಆರಂಭದಲ್ಲಿ ಸಭಾಪತಿಗಳು ಪ್ರಧಾನಮಂತ್ರಿ ಪ್ರತಿಪಕ್ಷದ ನಾಯಕರು ಹಾಗೂ ಇತರೆ ಸಚಿವರು ಆಗಮಿಸಿದರು. ಮಾನ್ಯ ಪ್ರಧಾನ ಮಂತ್ರಿಗಳು ಆಜಾಧಿಕಾ ಅಮೃತ್ ಮಹೋತ್ಸವದ ಕುರಿತು ಮಾತನಾಡಿ ನಂತರ ನೂತನವಾಗಿ ಆಯ್ಕೆಗೊಂಡ ಸದಸ್ಯರ ಪರಿಚಯ ಜೊತೆಗೆ ಪ್ರಮಾಣವಚನವನ್ನು ಸ್ವೀಕರಿಸಿದರು ಬಳಿಕ ನೇರವಾಗಿ ಕಲಾಪಕ್ಕೆ ಮುಂದಾದರು.
 ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ತಮಗೆ ನಿಗದಿಪಡಿಸಿದ್ದ ಹಾಸನಗಳಲ್ಲಿ ಕುಳಿತ ಬಳಿಕ ಸಭಾಧ್ಯಕ್ಷರು ಕಾರ್ಯಕಲಾಪ ಆರಂಭಿಸಿದರು. ನಿಧನ ಹೊಂದಿದ ಜನರಲ್ ವಿಪಿನ್ ರಾವತ್ ರಿಗೆ ಸಂತಾಪ ಸೂಚಿಸಿ, ಪ್ರಶ್ನೋತ್ತರ ವೇಳೆ ಶೂನ್ಯ ವೇಳೆ ಹೀಗೆ ಸಂಸತ್ತಿನಲ್ಲಿ ನಡೆಯುವ ಕಲಾಪವನ್ನೇ ಇಲ್ಲೂ ಮರು ಸೃಷ್ಟಿಸಿದರು. ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡು ಪ್ರಸ್ತುತ ಸನ್ನಿವೇಶಕ್ಕೆ ಸರಿ ಸಮಾನವಾಗಿ ವಿರೋಧಪಕ್ಷಗಳ ನಾಯಕರುಗಳು ಪ್ರಶ್ನೆಗಳನ್ನು ಕೇಳಿ ಸರ್ಕಾರದಿಂದ ಉತ್ತರ ಪಡೆದರು.
ವಿಶೇಷವಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ, ನಿರುದ್ಯೋಗ, ಪಾಸ್ಪೋರ್ಟ್ ಸೇವಾ ಕೇಂದ್ರಗಳು, ರೈತರ ಬಗೆಹರಿಯದ ಸಮಸ್ಯೆಗಳು, ಶಿಕ್ಷಕರು ಹಾಗೂ ಶಾಲಾ ಕಾಲೇಜುಗಳ ವ್ಯವಸ್ಥೆಗಳು, ಅತ್ಯಾಚಾರ ಭ್ರಷ್ಟಾಚಾರ ವಿಚಾರವಾಗಿ ಕೇಳಿದ ಪ್ರಶ್ನೆಗಳು ಗಮನ ಸೆಳೆದವು. ನೋಡುಗರಿಗೆ ತಾವು ಸಂಸತ್ತಿನಲ್ಲಿ ಕುಳಿತು ಕೇಳಿದ ಅನುಭವವನ್ನು ಮೂಡಿಸುವುದರಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯ ನಿವೃತ್ತ ಪ್ರಾಂಶುಪಾಲರಾದ ಡಾ.ಟಿ.ಪಿ ಆಂಟೋನಿ , ಪ್ರಜಾಪ್ರಭುತ್ವ ನಮಗೆ ಭದ್ರತೆ ಕೊಟ್ಟು ಬದುಕಲು ಅವಕಾಶ ಮಾಡಿಕೊಟ್ಟಿದೆ. ಸದನಕ್ಕೆ ಅದರದೇ ಆದ ಚೌಕಟ್ಟಿದೆ ಅದನ್ನು ನೀವುಗಳು ಕಣ್ಣಿಗೆ ಮರುಕಟ್ಟಿದ್ದೀರಿ. ಅಧ್ಯಯನ ಬೇರೆ ಸ್ವತ ಪ್ರಯೋಗಗಳು ಬೇರೆ ಎಂದು ವಿದ್ಯಾರ್ಥಿಗಳ ಪ್ರಯತ್ನಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ.ಧ.ಮ. ಪದವಿ ಕಾಲೇಜಿನ ಪ್ರಾಂಚ್ಪಾಲರಾದ ಡಾ. ಉದಯಚಂದ್ರ ಪಿ.ಎನ್ ವಿದ್ಯಾರ್ಥಿಗಳಿಗೆ ಅಭಿನಂದಿಸಿ ವಿಭಾಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಆಯೋಜಕರಾದ ವಿಭಾಗದ ಮುಖ್ಯಸ್ಥೆ ಡಾ. ಶಲೀಪ್ ಮಾತನಾಡಿ ರೂಪರೇಶದ ಒರಸೆಯ ಚೌಕಟ್ಟನ್ನು ಕಳೆದುಕೊಂಡಿರುವ ಇತ್ತೀಚಿಗೆನ ಸಂಸತ್ತಿನ ಕಲಾಪದ ಮುಂದೆ ನೀತಿ ನಿಯಮಾವಳಿಗಳ ಕಲಾಪದ ಪರಿಚಯ ವಿದ್ಯಾರ್ಥಿಗಳಿಗೆ ಬೇಕಿದೆ. ಅದು ವಿದ್ಯಾರ್ಥಿಗಳ ಪ್ರಯೋಗ – ಪ್ರಯತ್ನದಿಂದ ಸಾಧ್ಯವಾಯಿತು ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರಾದ ನಟರಾಜ್ ಹಾಗೂ ಇತರ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಶಿವಕುಮಾರ್ ನಿರೂಪಿಸಿ, ಮನೋಜ್ ವಂದಿಸಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು