News Karnataka Kannada
Tuesday, May 07 2024
ಕ್ಯಾಂಪಸ್

ಉಜಿರೆ: ಎಸ್‌ಡಿಎಂನಲ್ಲಿ ಮಾಹಿತಿ ಕಾರ್ಯಗಾರ ಮತ್ತು ವೈದ್ಯಕೀಯ ಕೋಡಿಂಗ್‌ ತರಬೇತಿಗೆ ಚಾಲನೆ

Ujire: Launch of Information Workshop and Medical Coding Training at SDM
Photo Credit : News Kannada

ಉಜಿರೆ: ಶ್ರೀ ಧ.ಮಂ ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ ಹಾಗೂ ಯೂನೈಟೆಡ್‌ ಹೆಲ್ತ್‌ ಗ್ರೂಪ್‌ನ ಅಂಗಸಂಸ್ಥೆ ಒಪ್ಟಮ್‌ನ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಅ.8ರಂದು ಮಾಹಿತಿ ಕಾರ್ಯಗಾರ ಮತ್ತು 5 ವಾರಗಳ ವೈದ್ಯಕೀಯ ಕೋಡಿಂಗ್‌ ತರಬೇತಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಒಪ್ಟಮ್‌ನ ಉಪಾಧ್ಯಕ್ಷ ಒರ್ವಿಲ್‌ ಜೇಮ್ಸನ್‌ ಡಿಸೋಜ ಸಂಸ್ಥೆಯ ಉದ್ಯೋಗಾವಕಾಶದ ಬಗ್ಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪಿ.ಎನ್‌ ಉದಯಚಂದ್ರ ಕೈಗಾರಿಕಾ ಕೌಶಲ್ಯವನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಳ್ಳಬೇಕು ಎಂದರು.

ಸಂಸ್ಥೆಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳಿದ್ದು ಮೊದಲ ಸುತ್ತಿನಲ್ಲಿ ಪರೀಕ್ಷೆ ಮೂಲಕ ಅಭ್ಯರ್ಥಿ ಆಯ್ಕೆ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 5 ವಾರಗಳ ತರಬೇತಿ ನೀಡಿ ಎಎಪಿಸಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಉದ್ಯೋಗ ನೀಡಲಾಗುತ್ತದೆ. ಸುಮಾರು 80 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಟ್ಯಾಲೆಂಟ್ ಅಕ್ವಿಜಿಶನ್‌ ಹೆಡ್‌ ಕ್ಲೆಮೆಂಟ್‌ ಜಾಯೆಲ್‌ ಸಿಕ್ವೇರಾ, ಮೆಡಿಕಲ್‌ ಕೋಡಿಂಗ್‌ ಮ್ಯಾನೇಜರ್‌ ಭಾಸ್ಕರ ಮಾಂಡ್ಲೆಮ್‌ ಉಪಸ್ಥಿತರಿದ್ದರು. ಉಪನ್ಯಾಸಕ ಹರೀಶ್‌ ಶೆಟ್ಟಿ ಸ್ವಾಗತಿಸಿ ಡಾ. ಪಿ ವಿಶ್ವನಾಥ್‌ ವಂದಿಸಿದ್ದು ವಿದ್ಯಾರ್ಥಿನಿ ಸಮೀಕ್ಷಾ ಹಾಗೂ ಸಂಧ್ಯಾ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು