ಉಜಿರೆ: ರಸ್ತೆ ನಿಯಮ ಉಲ್ಲಂಘಿಸಿದವರಿಗೆ ಚಾಕಲೇಟ್!

ಉಜಿರೆ : ರಸ್ತೆ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಏನಾಗುತ್ತದೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಸಂಚಾರಿ ಪೊಲೀಸರ ಕಣ್ಣಿಗೆ ಬಿದ್ದರೆ ದಂಡ ಕಟ್ಟಬೇಕಾಗುತ್ತದೆ. ಆದರೆ ಶನಿವಾರ ಉಜಿರೆಯು ಇದಕ್ಕೆ ತದ್ವಿರುದ್ಧದ ವಿದ್ಯಮಾನಕ್ಕೆ ಸಾಕ್ಷಿಯಾಯಿತು.

ಹೆಲ್ಮೆಟ್ ಧರಿಸದೆ ಇರುವವರು, ಹೆಚ್ಚು ವೇಗದಲ್ಲಿ ವಾಹನ ಚಲಾಯಿಸುವವರು, ಸೀಟ್ ಬೆಲ್ಟ್ ಧರಿಸದವರೂ ಸೇರಿದಂತೆ ರಸ್ತೆ ನಿಯಮ ಉಲ್ಲಂಘಿಸಿದವರನ್ನು ನಿಲ್ಲಿಸಿ ಉಜಿರೆ ಎಸ್.ಡಿ.ಎಂ ಕಾಲೇಜಿನ ತೃತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಂಚಾರಿ ಪೊಲೀಸರೊಂದಿಗೆ ಚಾಕಲೇಟ್ ಹಾಗೂ ಭಿತ್ತಿಪತ್ರ ನೀಡಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಮಹತ್ವವನ್ನು ತಿಳಿ ಹೇಳಿದರು.

ಕಾಲೇಜು ರಸ್ತೆಯಿಂದ ಆರಂಭವಾದ ಅಭಿಯಾನ ಉಜಿರೆ ಮುಖ್ಯ ರಸ್ತೆಯವರೆಗೆ ಸಾಗಿತು. ಹಿರಿಯ ಪೊಲೀಸ್ ಅಧಿಕಾರಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಘೋಷ ವಾಕ್ಯಗಳನ್ನು ಕೂಗಿದರು.

ದಂಡ ಹಾಕುತ್ತಾರೋ ಎಂಬ ಭಯದಲ್ಲಿದ್ದ ಪ್ರಯಾಣಿಕರಿಗೆ ಚಾಕಲೇಟ್ ನೀಡಿದಾಗ ವಿಭಿನ್ನ ಭಾವನೆಗಳನ್ನು ವ್ಯಕ್ತಪಡಿಸಿದರು. ಕೆಲವರು ನಗುತ್ತಾ ಸಿಹಿ ಸ್ವೀಕರಿಸದರೆ, ಇನ್ನು ಕೆಲವರು ನಾಚಿಕೆಯ ಸ್ವಭಾವ ಹಾಗೂ ಆಶ್ಚರ್ಯದಿಂದ ಚಾಕಲೇಟ್ ಸ್ವೀಕರಿಸಿ ಮುಜುಗರಕ್ಕೊಳಗಾದರೂ ಬಚಾವ್ ಆದೆ ಎನ್ನುತ್ತಾ ತಮ್ಮ
ಪ್ರಯಾಣವನ್ನು ಮುಂದುವರೆಸಿದರು.

ಈ ಕಾರ್ಯಕ್ರಮಕ್ಕೆ ಉಜಿರೆ ಎಸ್.ಡಿ.ಎಂ ಕಾಲೇಜಿನ ಟ್ಯಾಲೆಂಟ್ಸ್ ಕಾರ್ನರ್‌ನಲ್ಲಿ ಚಾಲನೆ ದೊರೆತಿದ್ದು ಬೆಳ್ತಂಗಡಿ ಸಂಚಾರಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಡಿಯಪ್ಪ ಗೌಡ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಬೆಲೆಬಾಳುವ ವಾಹನವನ್ನು ಖರೀದಿಸಿದರೆ ಸಾಲದು. ರಸ್ತೆ ನಿಯಮಗಳಿಗನುಗುಣವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಚಲಿಸಬೇಕು ಎಂದು ಹೇಳಿದರು.

ಮನೆಯ ನೀತಿ ನಿಯಮಗಳಿಗೆ ಹೇಗೆ ಬದ್ಧರಾಗಿರುತ್ತೇವೋ ಅಂತೆಯೇ ರಸ್ತೆ ನಿಯಮಗಳನ್ನೂ ಗೌರವಿಸಬೇಕು. ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಅಪಘಾತ ಸಂಭವಿಸುವುದರಿಂದ ಅಪರಾಧ ತಡೆ ಮಾಸ ಆಚರಿಸಿ ಜಾಗೃತಿ
ಮೂಡಿಸಲಾಗುತ್ತದೆ ಎಂದರು.

ವಾಹನ ಸವಾರರು ರಸ್ತೆಯಲ್ಲಿರುವವರು ತಮ್ಮ ಮನೆಯವರು ಎಂದು ಭಾವಿಸಬೇಕು. ನಾವು ರಕ್ತದಾನ ಮಾಡಬೇಕು ಆದರೆ ರಸ್ತೆಯಲ್ಲಿ ನಮ್ಮ ರಕ್ತ ಚೆಲ್ಲಬಾರದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಜಯಕುಮಾರ್ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ರಸ್ತೆ ನಿಯಮ ಉಲ್ಲಂಘಿಸುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಲಾಯಿತು. ವಾಹನ ಸಂಚಾರದ ಹೊಸ ನಿಯಮಗಳನ್ನು ತಿಳಿಯಲು ಕಾರ್ಯಕ್ರಮ ಸಹಕಾರಿಯಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಮಾಹಿತಿಯನ್ನು ತಿಳಿಸುತ್ತೇವೆ ಎಂದು ವಿದ್ಯಾರ್ಥಿಗಳು ಅನುಭವ
ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ರತ್ನಾವತಿ.ಕೆ, ಸಹಾಯಕ ಪ್ರಾಧ್ಯಾಪಕ ಭಾನುಪ್ರಕಾಶ್ ಬಿ.ಇ, ಡಾ.ಲಕ್ಷ್ಮಿ ನಾರಾಯಣ್ ಕೆ. ಎಸ್, ಸೂರ್ಯನಾರಾಯಣ್ ಭಟ್ ಪಿ, ಸುಮನ್ ಜೈನ್ ಹಾಗೂ ಸಂಚಾರಿ ಪೊಲೀಸ್ ವಿಭಾಗದ ಆರಕ್ಷಕರು ಉಪಸ್ಥಿತರಿದ್ದರು.

ವರದಿ: ರಕ್ಷಾ ಕೋಟ್ಯಾನ್

Sneha Gowda

Recent Posts

ʼಮೇ 18-19 ಹಳ್ಳಿಗಟ್ಟು ಬೋಡ್ ನಮ್ಮೆ: ಮೇ 11 ರಂದು ದೇವ ಕಟ್ಟ್ ಬೀಳುವುದುʼ

ಕೆಸರಿನ ಓಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್…

21 mins ago

ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌-ಕಣಗಿಲು ಜಾತಿಗೆ ಸೇರಿದ…

43 mins ago

50 ಕೋ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿಮಾಲ್‌: ಬೀಗ ಜಡಿದ ಬಿಬಿಎಂಪಿ

ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ ಬೆಳ್ಳಂಬೆಳಗ್ಗೆಯೇ  ಬೀಗ…

49 mins ago

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ : ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಕಚ್ಚಿದ ಘಟನೆ ಬೆಳಗಾವಿ ನ್ಯೂ ಗಾಂಧಿನಗರದಲ್ಲಿ ನಡೆದಿದೆ.

1 hour ago

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಮುಸ್ತಾಫ ಸೆರೆ

ದೇಶವನ್ನೇ ಬೆಚ್ಚಿಬೀಳಿಸಿದ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ…

1 hour ago

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಸುಳ್ಯದಲ್ಲಿ ಪತ್ತೆ

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಹಚ್ಚಿದ್ದಾರೆ

1 hour ago