“ಮನುಷ್ಯನ ಪ್ರಜ್ಞಾಜಾಗೃತಿಗೆ ಸಾಹಿತ್ಯಲೋಕ ಸಹಕಾರಿ”: ವಿಕ್ರಂ ನಾಯಕ್

ಉಜಿರೆ: “ಇತ್ತೀಚಿನ ದಿನಮಾನಗಳಲ್ಲಿ ಮಾನವ ಸಂಘರ್ಷಕ್ಕೆ ಸಾಹಿತ್ಯ ಅಧ್ಯಯನವು ಮದ್ದಾಗಿ ಕಾರ್ಯನಿರ್ವಹಿಸಬಲ್ಲದು” ಎಂದು ಮೂಡುಬಿದಿರೆಯ ಎಕ್ಸಲೆಂಟ್ ಪಿ.ಯು. ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥ ವಿಕ್ರಂ ನಾಯಕ್ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಸಾಹಿತ್ಯ ಸಂಘಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಾಹಿತ್ಯ ಕ್ಷೇತ್ರವು ಸದಾ ವೈವಿಧ್ಯತೆಯ ಆಗರವಾಗಿದ್ದು, ಓದುಗರಲ್ಲಿ ವಿಮರ್ಶಾ ಭಾವವನ್ನು ಜಾಗೃತಗೊಳಿಸುತ್ತದೆ. ಇಂಗ್ಲಿಷ್ ಸಾಹಿತ್ಯವಂತೂ ತನ್ನ ಒಡಲಲ್ಲಿ ಅಪಾರವಾದ ಜ್ಞಾನಭಂಡಾರವನ್ನು ಅಡಕವಾಗಿರಿಸಿಕೊಂಡಿದೆ. ಅದರ ಸದುಪಯೋಗವನ್ನು ಪ್ರತಿಯೋರ್ವ ನಾಗರಿಕನೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಶೇಕ್ಸ್ ಪಿಯರ್ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಸಾಹಿತಿಯಾಗಿದ್ದರು. ಇಂದಿನ ಬಹುಪಾಲು ಯುವಪೀಳಿಗೆ ಶೇಕ್ಸ್ ಪಿಯರ್ ಕೃತಿಗಳನ್ನು ಓದುವಾಗ, ಇಂದಿನ ಕಾಲಮಾನಕ್ಕೆ ತಕ್ಕ ಪರಿದೃಷ್ಟಿಯಲ್ಲಿ ಅವರನ್ನು ಅಳೆಯುತ್ತಾರೆ. ಶೇಕ್ಸ್ ಪಿಯರ್ ಸಾಹಿತ್ಯದಲ್ಲಿ ಜನಾಂಗೀಯ ಭೇದವನ್ನು ಹುಟ್ಟುಹಾಕಿದರೆಂದು ಸಂಬೋಧಿಸುತ್ತಾರೆ. ದಿಟದಲ್ಲಿ, ಆಯಾ ಕಾಲಮಾನಕ್ಕೆ ತಕ್ಕುದಾದ ದೃಷ್ಟಿಯಲ್ಲಿ ಅವರ ಕೃತಿಗಳನ್ನು ವಿಮರ್ಶಿಸಬೇಕೇ ವಿನಃ ಇಂದಿನ ಸಾಮಾಜಿಕತೆಗೆ ಅನುಗುಣವಾಗಲ್ಲ ಎಂದರು.

ವ್ಯಕ್ತಿಯೊಬ್ಬ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿದರೂ, ಅಲ್ಲಿನ ಸಾಂಸ್ಕೃತಿಕ ವೈವಿಧ್ಯತೆಯ ಜೊತೆಗೆ, ಆಹಾರ ವೈವಿಧ್ಯತೆಯನ್ನು ಗುರುತಿಸಿ ಅನುರಣಿಸುವ ವಿಶಾಲ ಮನಃಸ್ಥಿತಿ ಬೇಕಾಗುತ್ತದೆ. ತನ್ನ ಹವ್ಯಾಸಗಳಲ್ಲಿ ಅಳವಡಿಸಿಕೊಂಡ ವೈವಿಧ್ಯತೆಯೇ ಆತನ ಸಾಹಿತ್ಯಲೋಕ ಮತ್ತು ಅಭಿರುಚಿಗಳಲ್ಲಿ ಹೊರಹೊಮ್ಮುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉದ್ಘಾಟನೆ ನೆರವೇರಿಸಿದ ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥ ಪ್ರೊ. ಗಜಾನನ ಆರ್. ಭಟ್ ವಿಭಾಗದ ಭಿತ್ತಿಪತ್ರಿಕೆ ಬಿಡುಗಡೆಗೊಳಿಸಿದರು.

ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಸಂಘದ ಕಾರ್ಯನೀತಿಗಳಿಗೆ ಬದ್ಧರಾಗಿರುತ್ತೇವೆಂದು ವಿದ್ಯಾರ್ಥಿಗಳು ಪ್ರಮಾಣಗೈದರು.

ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ. ಮಂಜುಶ್ರೀ ಆರ್. ಮತ್ತು ಸಹಾಯಕ ಪ್ರಾಧ್ಯಾಪಕ ಪ್ರೊ. ವಿಘ್ನೇಶ್ ಐತಾಳ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅದಿರಾ ಅನಿಲ್ ಕಾರ್ಯಕ್ರಮ ನಿರೂಪಿಸಿದರು. ಸೆಸಿಲ್ ವಂದಿಸಿದರು.

Gayathri SG

Recent Posts

ನಾಳೆ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ದಿನಾಂಕ ನಿಗದಿಯಾಗಿದ್ದು, ನಾಳೆ ಬೆಳಗ್ಗೆ 10.30ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

5 mins ago

ಭಾರೀ ಮಳೆಗೆ ಬೈಕ್​ ಮೇಲೆ ಉರುಳಿ ಬಿದ್ದ ಮರ: ವ್ಯಕ್ತಿ ಮೃತ್ಯು

ರಾತ್ರಿ ಸುರಿದ ಭಾರೀ ಮಳೆಗೆ ಚಲಿಸುತ್ತಿದ್ದ ಬೈಕ್​ ಮೇಲೆ ಮರ ಬಿದ್ದ ಪರಿಣಾಮ ಸ್ಥಳದಲ್ಲೇ ಸವಾರ ಸಾವನ್ನಪ್ಪಿರುವ ಘಟನೆ ಕೋಲಾರ…

18 mins ago

ಕಾರಿನ ಮೇಲೆ ಹರಿದ ಲಾರಿ​ : 6 ಮಂದಿ ಸಾವು

ರಾಜಸ್ಥಾನದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಯಲ್ಲಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ.

20 mins ago

ಇಂದು (ಮೇ ೦8) ವಿಶ್ವ ರೆಡ್ ಕ್ರಾಸ್ ದಿನಾಚರಣೆ

ವಿಶ್ವ ರೆಡ್ ಕ್ರಾಸ್ ದಿನವನ್ನು ವಿಶ್ವದಾದ್ಯಂತ ಮೇ 8ರಂದು ಆಚರಿಸಲಾಗುತ್ತದೆ. ಸ್ವಿಸ್ ಉದ್ಯಮಿ ಮತ್ತು ವಿಶ್ವದ ಅತಿದೊಡ್ಡ ಮಾನವೀಯ ನೆರವು…

33 mins ago

ಡಿಕೆಶಿ ವಿರುದ್ಧ ಜೆಡಿಎಸ್‌-ಬಿಜೆಪಿ ಬೃಹತ್‌ ಪ್ರತಿಭಟನೆ

ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಬುಧವಾರ ಡಿಸಿಎಂ ಡಿ.ಕೆಶಿವಕುಮಾರ್‌ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ರಾಮನಗರದ ಐಜೂರು…

37 mins ago

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ದಿನಾಂಕ ಫಿಕ್ಸ್

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ತಮಿಳಿನ ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ…

52 mins ago