ಪುತ್ತೂರು: ಪ್ರಾದೇಶಿಕ ಭಾಷೆಯ ಮೂಲಕವೇ ಶಿಕ್ಷಣ ನೀಡುವುದು ಶಿಕ್ಷಣ ನೀತಿಯ ಉದ್ದೇಶ

ಪುತ್ತೂರು: ಮಾತೃ ಭಾಷೆಗೆ ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಕೇಂದ್ರ ಸರಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ಆಯಾಯ ಪ್ರಾದೇಶಿಕ ಭಾಷೆಯ ಮೂಲಕವೇ ಶಿಕ್ಷಣ ನೀಡುವುದು ಶಿಕ್ಷಣ ನೀತಿಯ ಉದ್ಧೇಶ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಅಂಗಸಂಸ್ಥೆ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)ದ ಸ್ವಾಯತ್ತತೆಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.

ಮಾತೃ ಭಾಷೆಯಿಂದಲೇ ವಿಶ್ವದ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಗುರುತಿಸಿಕೊಂಡಿವೆ. ಚೀನಾದ ಚೈನೀಸ್, ಫ್ರಾನ್ಸ್ ಫೆಂಚ್, ಜರ್ಮನಿ ಜರ್ಮನ್ ಹೀಗೆ ಮಾತೃ ಭಾಷೆಯ ಮೂಲಕವೇ ವ್ಯವಹರಿಸುತ್ತಿದೆ. ಇದೇ ಉದ್ಧೇಶವನ್ನಿಟ್ಟು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.

ಕರ್ನಾಟಕ ದೇಶದಲ್ಲೇ ಮೊದಲು ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ರಾಜ್ಯವಾಗಿದೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹೊಸ ಶಿಕ್ಷಣ ನೀತಿಯ ಸಫಲತೆಗೆ ಜನರ ಸಹಭಾಗಿತ್ವ ಅಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯ ಪಟ್ಟರು.

Gayathri SG

Recent Posts

ಬಿಜೆಪಿ ಮುಖಂಡ ಅರೆಸ್ಟ್: ರಾತ್ರೋರಾತ್ರಿ ಠಾಣೆಯಲ್ಲಿ ಧರಣಿ ನಡೆಸಿದ ಶಾಸಕ ಹರೀಶ್ ಪೂಂಜಾ

ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್…

7 mins ago

ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ತಾಯಿ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದ ನೌಬತ್‌ಪುರ ಪ್ರದೇಶದಲ್ಲಿ ಚಲಿಸುತ್ತಿದ್ದ…

12 mins ago

ರಘುಪತಿ ಭಟ್ ಆರೋಪಕ್ಕೆ ಡಾ. ಧನಂಜಯ ಸರ್ಜಿ ತಿರುಗೇಟು

ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ಪದವೀಧರ…

26 mins ago

ಕುಡಿಯುವ ನೀರಿನ ಸಮಸ್ಯೆ: ಕಲುಷಿತ ನೀರು ಸೇವಿಸಿ 114 ಮಂದಿಗೆ ಕಾಲರಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭೆ ಕ್ಷೇತ್ರವಾದ ವರುಣದ ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಅಲ್ಲಿನ ಜನ…

33 mins ago

ಆರ್‌ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ಮೈದಾನದಿಂದ ತೆರಳಿದ ಧೋನಿ..!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್​ಗಳಿಂದ…

43 mins ago

ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ಬಂದಿದೆ ಹಸಿರು ಕಳೆ

ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ.  ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ…

54 mins ago