News Karnataka Kannada
Tuesday, April 30 2024
ಕ್ಯಾಂಪಸ್

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಂಗಮ್ 2023

Sangam 2023 at St Aloysius College
Photo Credit : By Author

ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ವಿಭಾಗದವರು ಅಂತರ ವಿಭಾಗೀಯ ಸಾಂಸ್ಕೃತಿಕ ಸಂಭ್ರಮವನ್ನು ವಿದ್ಯಾರ್ಥಿಗಳಿಗಾಗಿ 12 ಏಪ್ರಿಲ್ 2023 ರಂದು ಲೊಯೋಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ತುಳು ಮತ್ತು ಕನ್ನಡ ಚಿತ್ರ ನಟ  ಪ್ರಕಾಶ್ ತುಮಿನಾಡ್ ಮುಖ್ಯ ಅತಿಥಿಯಾಗಿದ್ದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಸಹಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಮಂಗಳೂರಿನ ಅತ್ಯುತ್ತಮ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು ಒಂದಾಗಿದೆ ಎಂದರು. ಅವರು ಬಾಲ್ಯದಿಂದ ನಟನೆಯ ಬಗೆಗಿದ್ದ ಅವರ ಕನಸು ಮತ್ತು ಅದು ನನಸಾಗುವವರೆಗಿನ ತಮ್ಮ ಪ್ರಯಾಣವನ್ನು ಹಂಚಿಕೊಂಡರು ಮತ್ತು ಪ್ರತಿಭೆ ಮತ್ತು ಕನಸುಗಳ ಮಹತ್ವವನ್ನು ಎತ್ತಿ ತೋರಿಸಿದರು.

ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ ಅವರು ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಲು ದೃಢ ಸಂಕಲ್ಪ ಹಾಗೂ ಉತ್ಸಾಹದಿಂದ ಕೆಲಸ ಮಾಡಬೇಕು ಎಂದರು. ಇಂತಹ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಪಿಜಿ ವಿಭಾಗಗಳನ್ನು ಅಭಿನಂದಿಸಿದರು.

ರೆಕ್ಟರ್,  ಮೆಲ್ವಿನ್ ಪಿಂಟೋ ಎಸ್.ಜೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು  ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು  ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಸಂಸ್ಥೆಯಲ್ಲಿ ನಿರಂತರ ಮತ್ತು ನಿಸ್ವಾರ್ಥ ಸೇವೆಗಾಗಿ ಎಲ್‌ಸಿಆರ್‌ಐ ಬ್ಲಾಕ್‌ನ ನಿರ್ದೇಶಕ ಡಾ.ರಿಚರ್ಡ್ ಗೊನ್ಸಾಲ್ವಿಸ್ ಅವರನ್ನು ಸನ್ಮಾನಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಉತ್ಕೃಷ್ಟತೆಗಾಗಿ MJES ವಿದ್ಯಾರ್ಥಿವೇತನವನ್ನು ನೀಡಲಾಯಿತು. ಸಂಗಮದ ನಿಮಿತ್ತ, ತ್ಯಾಜ್ಯದಿಂದ ಸಂಪತ್ತು, ರಂಗೋಲಿ, ಚರ್ಚೆ, ಜಾನಪದ ನೃತ್ಯ, ಸೃಜನಾತ್ಮಕ ಬರವಣಿಗೆ, ಸಾಮಾನ್ಯ ರಸಪ್ರಶ್ನೆ, ಸಮೂಹ ಗಾಯನ, ಛಾಯಾಗ್ರಹಣ, ಕೊಲಾಜ್ ಮತ್ತು ಕ್ರೀಡಾಕೂಟಗಳಾದ ಷಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಥ್ರೋಬಾಲ್ ಮುಂತಾದ ಹಲವಾರು ಕಾರ್ಯಕ್ರಮಗಳು 5 ಅವಧಿಯಲ್ಲಿ ನಡೆದವು.

ಕಾರ್ಯಕ್ರಮದಲ್ಲಿ ರೆ. ಫಾ. ಮೆಲ್ವಿನ್ ಜೆ. ಪಿಂಟೊ ಎಸ್ ಜೆ, ರೆಕ್ಟರ್, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು, ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ, ಪ್ರಿನ್ಸಿಪಾಲ್ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು, ಡಾ ಅಲ್ವಿನ್ ಡೇಸಾ, ರಿಜಿಸ್ಟ್ರಾರ್ ಮತ್ತು ಪರೀಕ್ಷಾ ನಿಯಂತ್ರಕರು, ರೆ.ಫಾ. ವಿನ್ಸೆಂಟ್ ಜೆ ಪಿಂಟೊ ಎಸ್.ಜೆ. ಹಣಕಾಸು ಅಧಿಕಾರಿ, ಮಾಫೇ ಬ್ಲಾಕ್‌ನ ನಿರ್ದೇಶಕಿ ಡಾ.ಲವೀನಾ ಲೋಬೋ, ಎಲ್‌ಸಿಆರ್‌ಐ ಬ್ಲಾಕ್‌ನ ನಿರ್ದೇಶಕ ಡಾ.ರಿಚರ್ಡ್ ಗೊನ್ಸಾಲ್ವಿಸ್, ಪಿಜಿ ಸ್ಟಡೀಸ್ ಡೀನ್ ಡಾ.ಪಿ.ಪಿ.ಸಾಜಿಮೋನ್, ಸಂಗಮ್‌ನ ಮುಖ್ಯ ಸಂಯೋಜಕಿ ರೆನಿಟಾ ಜಾಯ್ಸ್ ಫರ್ನಾಂಡಿಸ್, ಸಹಾಯಕ ಸಂಯೋಜಕರಾದ ಜೀಸು ಜಾರ್ಜ್, ವಿದ್ಯಾರ್ಥಿ ಸಂಯೋಜಕರಾದ ಕಿಶೋರ್ ಬಿ.ಎನ್. ಮತ್ತು ಶ್ರೇಯಾ ಭಕ್ತ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನೆಯ ನಂತರ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮ ನಡೆಯಿತು. ವೆನೆಸ್ಸಾ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು. ರೆನಿಟಾ ಜೋಯ್ಸ್ ಫೆರ್ನಾಂಡಿಸ್ ಸ್ವಾಗತಿಸಿದರು. ಜೀಸು ಜಾರ್ಜ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು