News Karnataka Kannada
Monday, April 29 2024
ಕ್ಯಾಂಪಸ್

ಮಂಗಳೂರು: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠಕ್ಕೆ ನ್ಯಾಕ್ ನಿಂದ ‘ಎ’ ಮಾನ್ಯತೆ

Government First Grade Women's College, Balmatha gets 'A' status from NAAC
Photo Credit : By Author

ಮಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ನಿರ್ಧರಿಸುವ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಇದರಿಂದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ ಮಂಗಳೂರು ಇದಕ್ಕೆ ಸಿ.ಜಿ.ಪಿ.ಎ ೩.೦೭ ಅಂಕಗಳೊಂದಿಗೆ   ನ್ಯಾಕ್  ‘ಎ’ ದರ್ಜೆ ಮಾನ್ಯತೆ ಪಡೆದಿದೆ.

ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇದು ಗರಿಷ್ಠ ಗ್ರೇಡ್ ಎಂದು ದಾಖಲಾಗಿದೆ. ಖ್ಯಾತ ಶಿಕ್ಷಣ ತಜ್ಞರನ್ನೊಳಗೊಂಡ ನ್ಯಾಕ್ ತಂಡವು ಜನವರಿ ೬ ಮತ್ತು ೭ರಂದು, ಮೊದಲ ಸುತ್ತಿನ ಶೈಕ್ಷಣಿಕ ಮೌಲ್ಯಮಾಪನಕ್ಕಾಗಿ ಕಾಲೇಜಿಗೆ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟ ಮತ್ತು ಪೂರಕ ವ್ಯವಸ್ಥೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಕಾಲೇಜಿನ ಅಭಿವೃದ್ದಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿತ್ತು.

ಆಸ್ಸಾಂ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿರುವ ಪ್ರೊ. ಅಜಂತಾ ರಾಜ್ಕೊನ್ವರ್ ಅವರು ನ್ಯಾಕ್ ತಂಡದ ನೇತೃತ್ವವನ್ನು ವಹಿಸಿದ್ದರು. ಗುಜರಾತಿನ ಹೇಮಚಂದ್ರಾಚಾರ್ಯ ವಿಶ್ವವಿದ್ಯಾನಿಲಯದ ಪ್ರೊ. ಸಂಗೀತ ಶರ್ಮ ಸಂಯೋಜಕ ಸದಸ್ಯರಾಗಿ ಹಾಗೂ  ಮಹಾರಾಷ್ಟçದ ಮುಂಬಾಯಿಯ ಟೆಂಡರ‍್ಕರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಅನುರಾಧ ರಾನಡೆ ತಂಡದ ಸದಸ್ಯರಾಗಿದ್ದರು. ತಂಡವು ಕಾಲೇಜಿನ ಅಧ್ಯಾಪಕ ವೃಂದದವರ ಹಾಗೂ ವಿದ್ಯಾರ್ಥಿನಿಯರ ಕ್ರಿಯಾಶೀಲತೆಯನ್ನೂ, ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹಾಗೂ ಲಭ್ಯವಿರುವ ಸೌಲಭ್ಯಗಳನ್ನು ನ್ಯಾಕ್ ಪರಿಶೀಲಿಸಿ ಮೆಚ್ಚಿಕೊಂಡಿತ್ತು.

ಎರಡು ದಿನದ ಮೌಲ್ಯಮಾಪನದಲ್ಲಿ ಕಾಲೇಜಿನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟದ ಪರಿಶೀಲನೆಯನ್ನು ಮಾಡಿರುತ್ತಾರೆ. ಕಾಲೇಜಿನ ಗ್ರಂಥಾಲಯ ಹಾಗೂ ಗ್ರಂಥಾಲಯ ಕೇಂದ್ರಕ್ಕೆ, ಕ್ರೀಡಾ ವಿಭಾಗಕ್ಕೆ, ಗಣಕ ವಿಜ್ಞಾನ, ಗಣಿತ ಪ್ರಯೋಗಾಲಯ, ರಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರ ಪ್ರಯೋಗಾಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ ಬಾಳ ಮತ್ತು  ಐ.ಕ್ಯೂ.ಎ.ಸಿ ಹಾಗೂ  ನ್ಯಾಕ್ ಸಂಚಾಲಕರಾದ ಡಾ. ಚಂದ್ರಶೇಖರ ಕೆ. ಇವರ ನೇತೃತ್ವದ ಅಧ್ಯಾಪಕರ ತಂಡವು ನ್ಯಾಕ್ ಸಮಿತಿಯ ಮುಂದೆ ಅಗತ್ಯದ ದಾಖಲೆಗಳನ್ನು ಪ್ರಸ್ತುತಪಡಿಸಿದರು.

ನ್ಯಾಕ್ ಸಮಿತಿಯು ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರೂ ಹಾಗೂ ಶಾಸಕರಾದ ಡಿ. ವೇದವ್ಯಾಸಕಾಮತ್ ಅವರನ್ನೊಳಗೊಂಡ ಸದಸ್ಯರೊಂದಿಗೆ ಹಾಗೂ ಪೋಷಕರು ಮತ್ತು ಹಳೆವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿತ್ತು. ನ್ಯಾಕ್‌ತಂಡದ ಭೇಟಿಯ ಸಂದರ್ಭದಲ್ಲಿ ಕಾಲೇಜಿನ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ  ತೇಜೋಮಯ, ನಿಸರ್ಗದ  ಮಂಜುನಾಥ, ಕಲ್ಕೂರ ಪ್ರತಿಷ್ಟಾನದ  ಪ್ರದೀಪ್‌ಕುಮಾರ್ ಕಲ್ಕೂರ ಹಾಗೂ ಸರ್ವ ಸದಸ್ಯರು, ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ವಲಯದ ಮಾನ್ಯ ಜಂಟಿ ನಿರ್ದೇಶಕರಾದ ಡಾ. ಜೆನಿಫರ್ ಲೋಲಿಟಾ  ಹಾಗೂ ವಿಶೇಷಾಧಿಕಾರಿ ದೇವಿಪ್ರಸಾದ್, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರಮಾನಾಥ ಬಿ., ಕಾಲೇಜಿನ ನ್ಯಾಕ್‌ನ ಸಲಹೆಗಾರರಾದ ಪ್ರೊ. ಶಶಿಕಲಾ. ಕೆ, ಹಾಗೂ ಐ.ಕ್ಯೂ.ಎ.ಸಿ ಯ ಸಹ ಸಂಚಾಲಕರಾದಡಾ. ನಯನಾಎಲ್. ಎಂ  ಮತ್ತು ಕಾಲೇಜಿನ ಎಲ್ಲಾ ಅಧ್ಯಾಪಕರ ವೃಂದ ಹಾಗೂ ವಿದ್ಯಾರ್ಥಿನಿಯರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು