News Karnataka Kannada
Saturday, May 11 2024
ಕ್ಯಾಂಪಸ್

ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕ ಜಯಂತಿ ಆಚರಣೆ

Kanaka Jayanthi celebrations at Sri Rama Higher Primary School
Photo Credit : By Author

ಕಲ್ಲಡ್ಕ:  ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.

ಜೊತೆಗೆ ಜೀವನ ಚರಿತ್ರೆಯ ಕಿರುಚಿತ್ರವನ್ನು ತೋರಿಸಲಾಯಿತು. ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಪ್ರತೀಕ್ಷಾ ಶೆಟ್ಟಿ, ಮಾತನಾಡುತ್ತಾ “ಶ್ರೀನಿವಾಸ ದೇವರ ಹರಕೆಯಿಂದ ಹುಟ್ಟಿದ ಕಾರಣ ತಿಮ್ಮಪ್ಪ ನಾಯಕನೆಂಬ ಹೆಸರಿಟ್ಟರು. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲಿ ಪತ್ತೆಯಾದ ಸಂಪತ್ತನ್ನು ಊರಿನವರಿಗೆ ಹಂಚಿರುವುದರಿಂದ ಅವರಿಗೆ ಕನಕದಾಸ ಎಂಬ ಬಿರುದು ಬಂತು.

ಯಾರು ಮೋಕ್ಷದ ದಾರಿಗೆ ಹೋಗುತ್ತಾರೆ? ಎಂಬ ಪ್ರಶ್ನೆಗೆ “ನಾ ಹೋದರೆ ಹೋದೆನು’ ಎಂಬ ಉತ್ತರವನ್ನು ನೀಡಿದರು. ಅಂದರೆ ನಾನು ಎಂಬ ಅಹಂವನ್ನು ಬಿಟ್ಟರೆ ಮೋಕ್ಷದ ದಾರಿಗೆ ಹೋಗಬಹುದು ಎಂದು ತಾರ್ಕಿಕವಾಗಿ ಹೇಳಿದರು. ಉಡುಪಿಯ ಶ್ರೀಕೃಷ್ಣನ ದೇವಾಲಯದಲ್ಲಿ ದಾಸ್ಯಕ್ಕೆ ಒಳಗಾದ ದಾಸರಿಗೆ ಕಿಂಡಿಯ ಮೂಲಕ ದರ್ಶನ ಕೊಟ್ಟು ಕನಕನ ಕಿಂಡಿ ಎಂದು ಇಂದಿಗೂ ಪ್ರಸಿದ್ಧಿ ಪಡೆದಿದೆ. ಕನಕದಾಸರು ಹಲವಾರು ಕೀರ್ತನೆಗಳನ್ನು ರಚಿಸಿದ್ದು ಈಗಲೂ ಪ್ರಸಿದ್ಧಿ ಪಡೆದಿದೆ. ಕನಕದಾಸರು ತನ್ನ ಕೊನೆಯ ದಿನಗಳನ್ನು ಕಾಗಿನೆಲೆ ಆದಿಕೇಸವನ ಸನ್ನಿಧಾನದಲ್ಲಿ ಕಳೆಯುತ್ತಾ ಕೇಶವನಲ್ಲಿ ಲೀನಲಾಗುತ್ತಾನೆ” ಎಂದು ಕನಕದಾಸರ ಹುಟ್ಟು, ತಿಮ್ಮಪ್ಪ ನಾಯಕ ಕನಕದಾಸರಾದ ಕತೆ ನಂತರ ಪ್ರಾಂಪಚಿಕ ಜೀವನ ತೊರೆದು ಆಧ್ಯಾತ್ಮಿಕ ಚಿಂತೆಗೆ ಪರಿವರ್ತನೆಯಾದ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಅತಿಥಿ ಅಭ್ಯಾಗತರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ನಂತರ 6ನೇ ತರಗತಿಯ ಧಾತ್ರಿ ಕನಕದಾಸರ ಕೀರ್ತನೆಯನ್ನು ಹಾಡಿದರು. ವೇದಿಕೆಯಲ್ಲಿ ಪೂರ್ವಗುರುಕುಲ ಪ್ರಮುಖರಾದ ರೂಪಕಲಾ ಎಂ., ಹಿರಿಯ ಅಧ್ಯಾಪಕರಾದ ದೇವಿಕಾ ಪಿ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪವನ್ ನಾಯಕ್ ನಿರೂಪಿಸಿ, ಶ್ರೀವತ್ಸ ಸ್ವಾಗತಿಸಿ, ಪೂರ್ವಜ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು