News Karnataka Kannada
Sunday, April 28 2024
ಕ್ಯಾಂಪಸ್

ಹಾಸನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ವಿನೂತನ ಪ್ರಯತ್ನ: ಇಂಧನ ಉಳಿಸಿ ಅಭಿಯಾನ

Innovative initiative at Government Science College, Hassan: Save Energy Campaign
Photo Credit : News Kannada

ಹಾಸನ: ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರೆಲ್ಲರೂ ಸ್ವಂತ ವಾಹನವನ್ನು ತ್ಯಜಿಸಿ ಸರ್ಕಾರಿ ವಾಹನ ಮತ್ತು ಕಾಲಿಗೆ ಮೂಲಕ ಕಾಲೇಜಿಗೆ ಆಗಮಿಸುವ ಮೂಲಕ ಇಂಧನ ಉಳಿಸಿ ಅಭಿಯಾನವನ್ನು ಆಚರಿಸಲಾಯಿತು.

ಕಾಲೇಜಿನ ಏಕೋ ಅಂಡ್ ಅಡ್ವೆಂಚರ್ ಕ್ಲಬ್ ವತಿಯಿಂದ ಒಂದು ದಿನದ ಇಂಧನ ಉಳಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಕಾಲೇಜಿನ ೨೫೦೦ ವಿದ್ಯಾರ್ಥಿಗಳು ಹಾಗೂ ನೂರಕ್ಕೂ ಹೆಚ್ಚು ಉಪನ್ಯಾಸಕರು ತಮ್ಮ ಸ್ವಂತ ವಾಹನಗಳನ್ನ ಬಳಸದೆ ಸರ್ಕಾರಿ ಮತ್ತು ಸಾರ್ವಜನಿಕ ವಾಹನಗಳಲ್ಲಿ ಇಂದು ಕರ್ತವ್ಯಕ್ಕೆ ಹಾಜರಾಗುವ ಮೂಲಕ ವಿಶೇಷ ಪ್ರಯತ್ನ ಮಾಡಿದ್ದಾರೆ.

ಕಾಲೇಜಿನ ಅಧ್ಯಕ್ಷರು ಮತ್ತು ವಿದ್ಯಾರ್ಥಿಗಳು ಒಳಗೊಂಡಂತೆ ಎಲ್ಲರೂ ಪ್ರತಿದಿನ ಸರಾಸರಿ ಸ್ವಂತ ವಾಹನದಲ್ಲಿ ಕಾಲೇಜಿಗೆ ಬರುವವರ ಸಂಖ್ಯೆ ೫೦೦ ಜನರು ಆಗುತ್ತಿತ್ತು ಇದರಿಂದ ಒಂದು ಒಂದು ದಿನ ೧೮೦ ಲೀಟರ್ ಇಂಧನವನ್ನು ಉಳಿಸುವುದರೊಂದಿಗೆ ಪರಿಸರಕ್ಕೆ ಹೊರೆಯಾಗುತ್ತಿದ್ದ ಇಂಗಾಲದ ಡೈಯಾಕ್ಸೈಡ್ ಪ್ರಮಾಣ ೧,೧೭,೩೬೦ ಗ್ರಾಂ ಪರಿಸರಕ್ಕೆ ಹೋಗುವುದನ್ನ ತಪ್ಪಿಸಲಾಗಿದೆ.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಂಗೆಗೌಡ ಅವರು ಮಾತನಾಡಿ, ನಮ್ಮ ಕಾಲೇಜಿನ ಏಕೋ ಅಂಡ್ ಅಡ್ವೆಂಚರ್ ಕ್ಲಬ್ ವತಿಯಿಂದ ಪರಿಸರಕ್ಕೆ ಸಂಬಂಧಿಸಿದಂತೆ ಈ ರೀತಿ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಪರಿಸರ ಸಾಕಷ್ಟು ಮಾಲಿನವಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲು ಹಾಗೂ ವಿದ್ಯಾರ್ಥಿಗಳು ಕೂಡ ಇದರ ಬಗ್ಗೆ ಹೆಚ್ಚು ಜ್ಞಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಒಂದು ದಿನದ ಇಂಧನ ಉಳಿಸಿ ಅಭಿಯಾನವನ್ನು ಆರಂಭಿಸಲಾಗಿದ್ದು ಇದು ಇಂದು ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರು. ದೂರದ ಊರಿನಿಂದ ಬರುವಂತಹ ವಿದ್ಯಾರ್ಥಿಗಳು ಇಂದು ಸ್ವಂತ ವಾಹನವನ್ನು ತರದೆ ಎಲ್ಲರೂ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ ಮತ್ತು ಉಪನ್ಯಾಸಕರು ಇಲ್ಲಿ ಸ್ಥಳೀಯವಾಗಿ ಇದ್ದವರು ಕಾಲ್ನಡಿಗೆ ಮೂಲಕ ತರಗತಿಗಳಿಗೆ ಆಗಮಿಸಿದ್ದಾರೆ ಇದೊಂದು ಉತ್ತಮವಾದ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಏಕೋ  ಕ್ಲಬ್  ನ ಸಂಚಾಲಕರಾದ ಡಾಕ್ಟರ್ ಡಿ ಶಿವಕುಮಾರ್ ಸದಸ್ಯರಾದ ಡಾ. ದಯಾನಂದ್ ಪ್ರೊ.ಕಲಿಲ್ ಅಹಮದ್, ಡಾ ವಿನಯ್ ಕುಮಾರ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು