News Karnataka Kannada
Friday, May 10 2024
ಕ್ಯಾಂಪಸ್

ಯೆನೆಪೋಯದಲ್ಲಿ “ಆರೋಗ್ಯಕರ ನಗು” ದಂತ ಮಾಹಿತಿ ಕಾರ್ಯಕ್ರಮ

Healthy Laughter in Yenepoya" Dental Information Program
Photo Credit : News Kannada

ಮಂಗಳೂರು: ಯೆನೆಪೋಯ ದಂತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ  ಘಟಕ -1 ರ ವತಿಯಿಂದ ವಾರ್ಷಿಕ ವಿಶೇಷ ಕಾರ್ಯಕ್ರಮ “ಆರೋಗ್ಯಕರ ನಗು”- ಶಾಲಾ ದಂತ ಆರೋಗ್ಯಕರ ಮಾಹಿತಿ  ಕಾರ್ಯಕ್ರಮವನ್ನು ರೆಡ್ ಕ್ಯಾಮೆಲ್ ಇಸ್ಲಾಮಿಕ್ ಶಾಲೆಯಲ್ಲಿ ಜುಲೈ 19ರಂದು ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಚ್. ಆರ್ .ಈಶ್ವರ್ ,(ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಂಗಳೂರು ದಕ್ಷಿಣ ವಲಯ) ಭಾಗವಹಿಸಿ ಶಾಲಾ ಚಟುವಟಿಕೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.ಡಾ.ಶಾಮ್.ಎಸ್. ಭಟ್,( ಡೀನ್ –  ಫ್ಯಾಕಲ್ಟ್ ಆಫ್ ಡೆಂಟಿಸ್ಟ್ರಿ) ಮಾತನಾಡಿ ಶಾಲಾ ಮಕ್ಕಳ ದಂತ ಆರೋಗ್ಯದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಡಾ. ಅಶ್ವಿನಿ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನಾ ಸಂಯೋಜಕರು , ಯೆನೆಪೋಯ ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಮಕ್ಕಳ ದಂತ ಆರೋಗ್ಯವನ್ನು  ಸರಿಯಾಗಿ ಕಾಪಾಡಲು ಸಲಹೆ ನೀಡಿದರು.

ಡಾ. ಇಮ್ರಾನ್ ಪಾಷ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ, ಶಾಲಾ ದಂತ ಆರೋಗ್ಯ ಕಾರ್ಯಕ್ರಮದ  ಸಂಪೂರ್ಣ ಮಾಹಿತಿ ನೀಡಿದರು. ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.ಇದೆ ಸಂದರ್ಭದಲ್ಲಿ ಮಕ್ಕಳಿಗೆ ದಂತ  ಆರೋಗ್ಯ ಮಾಹಿತಿ ಪ್ರಾತ್ಯಕ್ಷತೆ, ಸ್ಪರ್ಧೆ ನಡೆಸಲಾಯಿತು. ಮೊಹಮ್ಮದ್ ನವಾಜ್, ಛೇರ್ಮನ್, ರೆಡ್ ಕ್ಯಾಮೆಲ್ ಶಾಲೆ, ಶೀಲವತಿ, ಸಿ. ಆರ್. ಡಿ, ಆಶಾಲತಾ  ಸೋನು, ಪ್ರಿನ್ಸಿಪಾಲ್, ರೆಡ್ ಕ್ಯಾಮೆಲ್ ಶಾಲೆ, ಅಧ್ಯಾಪಕರು, ಯೆನೆಪೋಯ ದಂತ ಕಾಲೇಜಿನ ದಂತ ವೈದ್ಯರು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು