News Karnataka Kannada
Saturday, May 11 2024
ಮಂಗಳೂರು

ವೃತ್ತಿಪರ ಭವಿಷ್ಯಕ್ಕೆ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆ: ಮಾಸ್ಟರ್ಸ್ಆಫ್ ಪಬ್ಲಿಕ್ ಹೆಲ್ತ್

Best choice for students for professional future: Masters of Public Health
Photo Credit : News Kannada

ಮಂಗಳೂರು: ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಪರ ಕೋರ್ಸ್ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಇಂತಹ ಕೋರ್ಸುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಾಧಾನ್ಯತೆ ಪಡೆಯುತ್ತಿರುವಂತಹ ಸಾರ್ವಜನಿಕ ಆರೋಗ್ಯ ವಿಭಾಗದ ಮಾಸ್ಟರ್‌ಆಫ್ ಪಬ್ಲಿಕ್ ಹೆಲ್ತ್ ಕೋರ್ಸುಗೆ ಯೇನೆಪೋಯ ವಿಶ್ವವಿದ್ಯಾಲಯದಲ್ಲಿ ದಾಖಲಾತಿಯು ಪ್ರಾರಂಭಗೊಂಡಿದೆ. ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಹೊಸದೇನಾದರೂ ಕಲಿಯಬೇಕು ಎಂದು ಇಚ್ಛಿಸುವ ಅರ್ಹ ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯವು ಅರ್ಜಿಗಳನ್ನು ಆಹ್ವಾನಿಸಿದೆ.

ನೀವು ದೈನಂದಿನ ಒತ್ತಡದ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆಗಳನ್ನೆದುರಿಸುತ್ತಿರುವ ಸಮುದಾಯದ ಜನರ ಆರೋಗ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಇಚ್ಛಿಸಿದ್ದಲ್ಲಿ, ಸಾರ್ವಜನಿಕ ನೀತಿ ಮತ್ತು ನಿರ್ವಹಣೆ, ವಿಪತ್ತು ಮತ್ತು ಹವಾಮಾನ ಅಧ್ಯಯನ, ರಾಷ್ಟ್ರೀಯ ಮತ್ತುಅಂತರರಾಷ್ಟ್ರೀಯ ಆರೋಗ್ಯ ನೀತಿಗಳು, ಆರೋಗ್ಯ ವ್ಯವಸ್ಥೆಗಳ ನಿರ್ವಹಣಾ ಕ್ರಮಗಳು, ಸಮುದಾಯ ಆರೋಗ್ಯದ ಮೇಲೆ ಹವಾಮಾನ ವೈಪರೀತ್ಯಗಳ ಪರಿಣಾಮ, ಸಾಂಕ್ರಾಮಿಕ ಪಿಡುಗುಗಳ ಅಧ್ಯಯನ ಮತ್ತು ಅವುಗಳ ತಡೆಗಟ್ಟುವಿಕಾ ಕ್ರಮಗಳು ಇತ್ಯಾದಿಗಳ ಬಗ್ಗೆ ಕಲಿಯಲು ಇಚ್ಛಿಸಿದಲ್ಲಿ ಮಾಸ್ಟರ್ಸ್ಆಫ್ ಪಬ್ಲಿಕ್ ಹೆಲ್ತ್ ಕೋರ್ಸು ಉತ್ತಮ ಆಯ್ಕೆಯಾಗಿದ್ದು ವಿವಿಧರಾಷ್ಟ್ರೀಯ ಮತ್ತುಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಸಹಾಯಕಾರಿಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಬದಲಾವಣೆಗಳನ್ನು ತರಲು ಈ ಸ್ನಾತಕೋತ್ತರ ಪದವಿಯು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ. ಯೇನೆಪೋಯ ವಿಶ್ವವಿದ್ಯಾಲಯವು ಎಡ್ವರ್ಡ್ಆಂಡ್ ಸಿಂಥಿಯಾ ಇನ್ಸ್ಟಿಟ್ಯೂಟ್‌ಆಫ್ ಪಬ್ಲಿಕ್ ಹೆಲ್ತ್(ಇಸಿಐಪಿಎಚ್) ಇದರ ಸಹಯೋಗದೊಂದಿಗೆ ಈ ಸ್ನಾತಕೋತ್ತರ ಪದವಿಯನ್ನು ನಡೆಸುತ್ತಿದೆ, ಎಡ್ವರ್ಡ್ಆಂಡ್ ಸಿಂಥಿಯಾ ಇನ್ಸ್ಟಿಟ್ಯೂಟ್‌ಆಫ್ ಪಬ್ಲಿಕ್ ಹೆಲ್ತ್(ಇಸಿಐಪಿಎಚ್) ಇದು ಪಬ್ಲಿಕ್ ಹೆಲ್ತ್ಕ್ಷೇತದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು ಯೇನೆಪೋಯ ವಿಶ್ವವಿದ್ಯಾಲಯದ ಎಂಪಿಎಚ್ ವಿಭಾಗದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಪ್ರಾಯೋಗಿಕ ಆಧಾರಿತವಾದ ಕಲಿಕೆಯನ್ನು ನೀಡುವುದಲ್ಲದೆ, ಸಮುದಾಯ ಆರೋಗ್ಯ ಕ್ಷೇತ್ರದಲ್ಲಿ ಭಾರೀ ಪ್ರಭಾವಿಯಾಗಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತೇಜನ ನೀಡಿ ಸಹಕರಿಸುತ್ತದೆ.

ಮಾಸ್ಟರ್ಸ್ಆಫ್ ಪಬ್ಲಿಕ್ ಹೆಲ್ತ್ ಕೋರ್ಸು ವೃತ್ತಿಪರ ಗೌರವ ಮತ್ತು ಸ್ಪರ್ಧಾತ್ಮಕ ಜ್ಞಾನವನ್ನು ಪಡೆಯಲು ಸಹಾಯಕಾರಿಯಾಗಿದ್ದು ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಗಳನ್ನು ಪಡೆಯಬಹುದಾಗಿದೆ. ಹೊರದೇಶಗಳಲ್ಲೂ ಉತ್ತಮ ಮಾನ್ಯತೆ ಪಡೆದಿರುವ ಕೋರ್ಸು ಇದಾಗಿದ್ದು ವಿದ್ಯಾರ್ಥಿಗಳಲ್ಲಿ ಜಾಗತಿಕ ಮಟ್ಟದ ಅರಿವು ಮೂಡಿಸಲು ಪೂರಕವಾಗುವಂತೆ ಕಲ್ಪಿಸಲಾಗಿದೆ. ಮಾಸ್ಟರ್ಸ್ಆಫ್ ಪಬ್ಲಿಕ್ ಹೆಲ್ತ್ ಕೋರ್ಸುಗೆ  ದಾಖಲಾತಿಯಾಗಲು ಯಾವುದೇ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 55% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕೋರ್ಸು ಕಲಿಯಲು ಆಸಕ್ತ ವಿದ್ಯಾರ್ಥಿಗಳು 7619633674 ಅಥವಾ 9699789383 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ಯೇನೆಪೊಯ ವಿಶ್ವವಿದ್ಯಾಲಯವು ಸುಮಾರು 9000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು, ನ್ಯಾಕ್‌ನಿಂದ ಎ+ ಗ್ರೇಡ್ ಮಾನ್ಯತೆ ಪಡೆದಿದೆ. ಯೇನೆಪೊಯ ಶಿಕ್ಷಣ ಸಂಸ್ಥೆಯು ದೇಶದ ಅತ್ಯುನ್ನತ 100 ವಿಶ್ವವಿದ್ಯಾಲಯಗಳಲ್ಲಿ 97ನೇ ಸ್ಥಾನದಲ್ಲಿದ್ದು, ಯೇನೆಪೊಯದಂತ ಮಹಾವಿದ್ಯಾಲಯವು ಎನ್‌ಐಆರ್‌ಎಫ್ ನಿಂದ ದೇಶದ ಆತ್ಯುನ್ನತ ವೈದ್ಯಕೀಯ ಸಂಸ್ಥೆಗಳಲ್ಲಿ 23ನೇ ಸ್ಥಾನವನ್ನು ಪಡೆದುಕೊಂಡಿದೆ. ಸುಮಾರು 35 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಯೇನೆಪೊಯ ಶಿಕ್ಷಣ ಸಂಸ್ಥೆಯು ಸುಸಜ್ಜಿತಕಟ್ಟಡ, ಪರಿಣತಉಪನ್ಯಾಸವರ್ಗ, ಸುಂದರ ಹಾಗೂ ಪರಿಸರಸ್ನೇಹಿ ಕ್ಯಾಂಪಸ್ ಮತ್ತು ಅನೇಕ ರೀತಿಯ ವಿದ್ಯಾರ್ಥಿ ವಿಕಸನ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು