News Karnataka Kannada
Tuesday, April 30 2024
ಕ್ಯಾಂಪಸ್

2022ರಿಂದ UUCMS ಅನುಷ್ಠಾನವನ್ನು ಕೈಗೆತ್ತಿಕೊಳ್ಳುತ್ತಿದೆ ಮಂಗಳೂರು ವಿಶ್ವವಿದ್ಯಾನಿಲಯ

Press Meet
Photo Credit :

ಮಂಗಳೂರು ವಿಶ್ವವಿದ್ಯಾನಿಲಯವು 2022ರಿಂದ ರಾಜ್ಯ ಸಮಗ್ರ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ನಿರ್ವಹಣ ವ್ಯವಸ್ಥೆ ಯುನಿಫೈಡ್ ಯುನಿವರ್ಸಿಟಿ ಕಾಲೇಜ್ ಮಾನೇಜ್ಮೆಂಟ್ ಸಿಸ್ಟಮ್ (UUCMS) ಅನುಷ್ಠಾನವನ್ನು ಕೈಗೆತ್ತಿಕೊಳ್ಳುತ್ತಿದೆ. ವಿಶ್ವವಿದ್ಯಾನಿಲಯಗಳು ಯಾವುದೇ ಹೊಸ ತಂತ್ರಾಂಶ ಖರೀದಿ/ನವೀಕರಣ ಕೈಗೆತ್ತಿಕೊಳ್ಳಬಾರದು ಎಂಬುದಾಗಿರುವ ಸರಕಾರದ ಸ್ಷಷ್ಟ ಸೂಚನೆಯ ಹಿನ್ನಲೆಯಲ್ಲಿ ಮಾನ್ಯ ಸಿಂಡಿಕೇಟ್‌ನ ನಿರ್ಣಯದಂತೆ ಮುಂಬರುವ ಮಾರ್ಚ್ ೨೦೨೨ರಲ್ಲಿ UUCMS  ಮುಖಾಂತರ ಪರೀಕ್ಷೆಗಳನ್ನು ನಡೆಸಲಾಗುವುದು.

ಇದರ ಜೊತೆಗೆ, ಕೋವಿಡ್ ಎರಡನೇ ಅಲೆ ಹಿನ್ನಲೆ ಏಪ್ರಿಲ್ ೨೦೨೧ರಲ್ಲಿ ಪ್ರಾರಂಭವಾಗಿ ಆಗಸ್ಟ್-ಸೆಪ್ಟೆಂಬರ್ ಹಾಗೂ ಸಪ್ಪೆಂಬರ್-ಅಕ್ಟೋಬರ್ ೨೦೨೧ರಲ್ಲಿ ನಡೆದ ಪದವಿ, ಸ್ನಾತಕೋತ್ತರ ಪದವಿ, ದೂರ ಶಿಕ್ಷಣದ ಪದವಿ/ಸ್ನಾತಕೋತ್ತರ ಪದವಿ, ಡಿಪ್ಲೊಮಾ/ಎಡ್ವಾನ್ಸ್ ಡಿಪ್ಲೊಮಾ/ಸರ್ಟಿಫಿಕೇಟ್/ಯು.ಜಿ.ಸಿ. ಆಡ್‌ಆನ್ ಕೋರ್ಸ್ ಪರೀಕ್ಷೇಗಳ ಎಲ್ಲಾ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಒಂದರ ನಂತರ ಒಂದಾಗಿ ನಡೆಸಬೇಕಾದ ಅನಿವಾರ್ಯತೆ ಎದುರಾದ್ದರಿಂದ ಹಲವಾರು ಸವಾಲುಗಳನ್ನು ಎದುರಿಸುವಂತಾಯಿತು. ಸದ್ರಿ ಪರೀಕ್ಷೆಗಳ  ಮೌಲ್ಯಮಾಪನಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮೂರು ಜಿಲ್ಲೆಗಳ ಮೂರು ಕೇಂದ್ರಗಳಲ್ಲಿ ನಡೆಸಿ, ಫಲಿತಾಂಶ ಪ್ರಕಟಣೆ ಮಾಡಲಾಗಿದೆ.

ಕೋವಿಡ್ -೧೯ರ ಎರಡನೇ ಅಲೆ ಹಿನ್ನೆಲೆಯಲ್ಲಿ ಯುಜಿಸಿ ನಿರ್ದೇಶನ ಹಾಗೂ ೨೦೨೦ರ ಮಾರ್ಗಸೂಚಿಯಂತೆ ಶೈಕ್ಷಣಿಕ ವರ್ಷ ೨೦೨೦-೨೧ನೇ ಸಾಲಿನ ವ್ಯಾಸಂಗದ ೨ ಮತ್ತು ೪ನೇ ಸೆಮಿಸ್ಟರ್‌ನ ಪದವಿ ಮಟ್ಟದ ಇಂಟರ್‌ಮೀಡಿಯೇಟ್ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್‌ಗೆ ಉತ್ತೀರ್ಣ ಮಾಡುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿಂದಿನ ಸೆಮಿಸ್ಟರ್‌ಗಳ ಒಟ್ಟು ಅಂಕಗಳ ಶೇಕಡಾ ೫೦ ಮತ್ತು ಪ್ರಸಕ್ತ ಸೆಮಿಸ್ಟರ್‌ನ ಆಂತರಿಕ ಅಂಕಗಳನ್ನು ಶೇಕಡಾ ೫೦ಕ್ಕೆ ಏರಿಕೆ ಮಾಡಿ ಫಲಿತಾಂಶವನ್ನು ಪ್ರಕಟಿಸಲಾಗುವುದು.

೨೦೧೯-೨೦ನೇ ಸಾಲಿನಲ್ಲಿ ಮೂರನೇ ಸೆಮಿಸ್ಟರ್‌ನಲ್ಲಿದ್ದ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು ೨೦೨೧ರಲ್ಲಿ ಮರು ಪರೀಕ್ಷೆಯ ಅವಕಾಶ ನೀಡಿದೆ. ತಮ್ಮ ಮೂರನೇ ಸೆಮಿಸ್ಟರ್ ಪೂರ್ಣಗೊಳಿಸಿದ ನಂತರ ಅವರಿಗ ಉತ್ತೀರ್ಣ ಸೌಲಭ್ಯವನ್ನು ನೀಡಲಾಗಿದೆ. ೨೦೨೦ರಲ್ಲಿ ಹಿಂಬಾಕಿ ಇರುವ ವಿದ್ಯಾರ್ಥಿಗಳಿಗೆ, ಕೋವಿಡ್ ಬಾಧಿತರಿಗೆ / ಪ್ರಯಾಣದ ತೊಂದರೆ ಉಂಟಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಯನ್ನು ಡಿಸೆಂಬರ್ ೦೭ರಿಂದ ೨೩ರ ತನಕ ನಡೆಸಲಾಗಿದೆ. ಮೌಲ್ಯಮಾಪನ ಪ್ರಕ್ರಿಯೆಯು ಮುಂದಿನ ವಾರದಿಂದ ನಡೆಯಲಿದೆ. ಸಂದಿಗ್ದ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾನಿಲಯದೊಡನೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು