ಕೋಟೇಶ್ವರ : ಕೋಟೇಶ್ವರ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ನ.13 ರಂದು ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಪ್ರಯುಕ್ತವಾಗಿ ಶಾಲಾ ವರಾಂಡವನ್ನು ರಂಗು ರಂಗಾಗಿ ಸಿಂಗರಿಸಲಾಗಿತ್ತು.
ಕಾರ್ಯಕ್ರಮದ ವಿಶೇಷವಾಗಿ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ದಿನದ ವಿಶೇಷವಾಗಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ವಿವಿಧ ಸಿಹಿತಿನಿಸು ಮಕ್ಕಳಿಗೆ ನೀಡಿದರು. ಹೀಗೆ ಮಕ್ಕಳು ಸಿಹಿಯನ್ನು ಸವಿದು ಬಣ್ಣ ಬಣ್ಣದ ಉಡುಪುಗಳನ್ನು ಧರಿಸಿದ ಖುಷಿಯಲ್ಲಿ ಇಡೀ ದಿನವನ್ನು ಸಂತೋಷವಾಗಿ ಕಳೆದರು.
ಈ ಸಂದರ್ಭದಲ್ಲಿ ಶಾಲಾ ಜಂಟಿ ಕಾರ್ಯ ನಿರ್ವಾಹಕರಾದ ಶ್ರೀಮತಿ ಅನುಪಮ ಎಸ್. ಶೆಟ್ಟಿ ಶಾಲಾ ಪ್ರಾಂಶುಪಾಲರಾದ ಶ್ರೀ. ಮೋಹನ್. ಕೆ ಮತ್ತು ಕಾಲೇಜು ಪ್ರಾಂಶುಪಾಲರಾದ ಶ್ರೀ. ಅರುಣ. ಡಿಸಿಲ್ವ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಧಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿ ಶ್ರೀಮತಿ. ಸುಲಕ್ಷಣ ನಿರೂಪಿಸಿದರು. ಸಹ ಶಿಕ್ಷಕಿ ಕು. ನಾಗರತ್ನ ಸ್ವಾಗತಿಸಿದರು. ಸಹಶಿಕ್ಷಕಿ ಕು. ಶ್ರುತಿ ವಂದಿಸಿದರು.