News Karnataka Kannada
Monday, April 29 2024
ಬೆಂಗಳೂರು

ಇಂದಿನಿಂದ ಪೂರ್ಣ ತರಗತಿ, ಎಲ್ ಕೆಜಿ-ಯುಕೆಜಿ ಅಂಗನವಾಡಿ ಆರಂಭ

School Children
Photo Credit :

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಎಲ್  ಕೆಜಿ-ಯುಕೆಜಿ, ಅಂಗನವಾಡಿ ಆರಂಭವಾಗಲಿವೆ. ಒಂದರಿಂದ ಐದನೇ ತರಗತಿ ಮಕ್ಕಳಿಗೆ ಪೂರ್ಣ ತರಗತಿಗಳು ನಡೆಯಲಿವೆ.

ಮನೆಯಿಂದಲೇ ಊಟ, ಉಪಹಾರ ತರಬೇಕು. ಜ್ವರ, ಕೆಮ್ಮು, ನೆಗಡಿ ಇದ್ದರೆ ಶಾಲೆಗೆ ಮಕ್ಕಳನ್ನು ಕಳುಹಿಸುವಂತಿಲ್ಲ. ಶಿಕ್ಷಕರು, ಸಿಬ್ಬಂದಿ ಪೋಷಕರಿಗೆ 2 ಡೋಸ್ ಲಸಿಕೆ ಕಡ್ಡಾಯವಾಗಿರುತ್ತದೆ.

ಅಂಗನವಾಡಿಗಳಲ್ಲಿ ಬೆಳಗ್ಗೆ 10 ರಿಂದ 12 ರವರೆಗೆ ಕಾರ್ಯನಿರ್ವಹಿಸಲಿವೆ. ಎಲ್ಕೆಜಿ-ಯುಕೆಜಿಗೆ ಬೆಳಗ್ಗೆ 9.30 ರಿಂದ 3:30 ರವರೆಗೆ ತರಗತಿ ನಡೆಯಲಿವೆ. ಶಾಲೆಗೆ ಬರುವ ಮಕ್ಕಳು ಪೋಷಕರ ಒಪ್ಪಿಗೆ ಪತ್ರ ತರಬೇಕು.

ಮಕ್ಕಳ ಸುರಕ್ಷತೆಗೆ ಅಂಗನವಾಡಿ, ಶಾಲೆಯ ಆವರಣ, ಕೊಠಡಿ, ಪೀಠೋಪಕರಣಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರೆ ತಂಡಗಳನ್ನು ರಚಿಸಿ ದಿನ ಬಿಟ್ಟು ದಿನ ಕ್ಲಾಸ್ ಮಾಡಲು ತಿಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು