ಉಜಿರೆ : 18 ಕಾರ್ ಬಟಾಲಿಯನ್ ಎನ್. ಸಿ. ಸಿ ಸಹಯೋಗದೊಂದಿಗೆ ಉಜಿರೆಯ ಶ್ರೀ.ಧ.ಮ ಕಾಲೇಜಿನ ನೇತೃತ್ವದಲ್ಲಿ ಎನ್.ಸಿ.ಸಿ
ಆರ್ಮಿ ಕೆಡೆಟ್ಸ್ ಗಳಿಗೆ ಫೈಯರಿಂಗ್ ಶಿಬಿರವು ಅಜ್ಜರಕಲ್ಲು ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಪಿ ಐ ಸ್ಟಾಫ್ ಸುಬೆದಾರ್ ಸಂದೀಪ್ ಫೈಯರಿಂಗ್ ಕುರಿತು ಮಾಹಿತಿಯನ್ನು ನೀಡಿದರು. ಶ್ರೀ.ಧ.ಮ ಪದವಿ
ಕಾಲೇಜು, ಅನುದಾನಿತ ಪ್ರೌಢ ಶಾಲೆ ಉಜಿರೆ , ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಸ.ಹಿ.ಪ್ರಾ ಶಾಲೆ ಪುಂಜಲಕಟ್ಟೆಯ ಒಟ್ಟು
220 ಕೆಡೆಟ್ಸ್ ಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಪೋಲೀಸ್ ಅನುಮತಿಯೊಂದಿಗೆ ಶಿಬಿರವು ನಡೆಯಿತು. ಇದರಲ್ಲಿ ಸಿ.ಒ ಆದ ಕರ್ನಲ್ ಎನ್ ಆರ್ ಬೀಡೆ , ಎಸ್ ಡಿ ಎಂ ಕಾಲೇಜಿನ
ಎನ್.ಸಿ.ಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್ ಹಾಗೂ ಲೆಫ್ಟಿನೆಂಟ್ ಶುಭಾರಾಣಿ, ಮಡಂತ್ಯಾರ್ ಕಾಲೇಜಿನ ಎನ್.ಸಿ.ಸಿ
ಅಧಿಕಾರಿ ಆಲ್ವಿನ್ ಹಾಗೂ ಇನ್ನಿತರ ಕಾಲೇಜಿನ ಎನ್.ಸಿ.ಸಿ ಅಧಿಕಾರಿಗಳು ಉಪಸ್ಥಿತರಿದ್ದರು..