Bengaluru 24°C
Ad

ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳಲ್ಲಿ ಯಾವುದೇ ಮಾರಕ ರಾಸಾಯನಿಕ ಇಲ್ಲ

ದೇಶದಾದ್ಯಂತ ಎಂಡಿಎಚ್​ ಮತ್ತು ಎವರೆಸ್ಟ್ ಮಸಾಲೆ ಮಾದರಿಗಳಲ್ಲಿ ಮಾರಕ ರಾಸಯನಿಕ ಕಾರ್ಸಿನೋಜೆನ್ ಎಥಿಲೀನ್ ಆಕ್ಸೈಡ್ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (FSSAI) ಕ್ಲೀನ್‌ಚಿಟ್‌ ನೀಡಿದೆ.

ಈ ಎರಡು ಮಸಾಲೆ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಪತ್ತೆ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಸುಮಾರು 34ಮಾದರಿಗಳನ್ನು ದೇಶಾದ್ಯಂತ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು.ವಿವಿಧ ಉತ್ಪಾದನಾ ಘಟಕಗಳಿಂದ ಭಾರತೀಯ ಮಸಾಲೆಗಳ 300 ಮಾದರಿಗಳ ವ್ಯಾಪಕ ಪರೀಕ್ಷೆಯ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.

ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ ಗಳನ್ನು ಸಿಂಗಾಪುರ, ಹಾಂಕಾಂಗ್‌ ಮತ್ತು ಜಪಾನ್‌ನಲ್ಲಿ ಬ್ಯಾನ್‌ ಮಾಡಲಾಗಿತ್ತು. ಈ ಹಿನ್ನಲೆ ಇದೀಗ ಪರೀಕ್ಷೆ ನಡೆಸಲಾಗಿದ್ದು ಯಾವುದೇ ಮಾರಕ ರಾಸಾಯನಿಕ ಕಂಡುಬಂದಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.

Ad
Ad
Nk Channel Final 21 09 2023
Ad