ಬೆಂಗಳೂರು: ಬಸ್‌ನಲ್ಲಿ ಚಿನ್ನಾಭರಣವಿದ್ದ ಬ್ಯಾಗನ್ನು ಬಿಟ್ಟು ಹೋಗಿದ್ದು, ಸುರಕ್ಷಿತವಾಗಿ ಮಾಲೀಕರಿಗೆ ಬಿಎಂಟಿಸಿ ಬಸ್ ಸಿಬ್ಬಂದಿ ಹಿಂದಿರುಗಿಸಿದ್ದು, ಅವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿರುವ ಬ್ಯಾಗನ್ನು ಬಸ್‌ನಲ್ಲಿ ಬಿಟ್ಟು ಇಳಿದಿದ್ದ ಮಹಿಳೆಗೆ ಬ್ಯಾಗನ್ನು ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ. ಜನವರಿ 31 ರಂದು ಕೆಆರ್ ಮಾರ್ಕೆಟ್‌ನಿಂದ ಪದ್ಮನಾಭ ನಗರಕ್ಕೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿತ್ತು. ಕೆ.ಆರ್ ಮಾರ್ಕೆಟ್‌ನಲ್ಲಿ ಬಸ್ ಹತ್ತಿದ ಮಹಿಳೆಯೊಬ್ಬರು ಚಿನ್ನಾಭರಣವಿರುವ ಬ್ಯಾಗನ್ನು ಬಸ್‌ನಲ್ಲೇ ಬಿಟ್ಟು ಬಸವನಗುಡಿಯಲ್ಲಿ ಇಳಿದಿದ್ದರು.
ಬಸ್ ರಶ್ ಇದ್ದ ಕಾರಣ ಸಿಬ್ಬಂದಿ ಬ್ಯಾಗ್ ಗಮನಿಸಿರಲಿಲ್ಲ. ನಂತರ ಮಹಿಳೆ ಬಿಎಂಟಿಸಿ ಸೆಂಟ್ರಲ್ ಆಫೀಸ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಟಿಕೆಟ್‌ನಲ್ಲಿ ನಮೂದಿಸಿದ ಬಸ್ ನಂಬರ್ ಮೂಲಕ ಬಸ್ ಪತ್ತೆ ಮಾಡಿ, ಬಸ್‌ಗೆ ಹೋದಾಗ ಬ್ಯಾಗ್ ಸಿಕ್ಕಿದ್ದು, ಬಸ್ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

