ರಾಮನಗರ: ಮಹಿಳೆಯೊಬ್ಬರಿಗೆ ಕರೆಮಾಡಿದ ಸೈಬರ್‌ವಂಚಕರು ಅವರಿಂದ ಒಟಿಪಿ ಪಡೆದು 18.10 ಲಕ್ಷ ರೂ. ಹಣ ವಂಚನೆ ಮಾಡಿರುವ ಘಟಕೆ ಬೆಂಗಳೂರಿನ ರವಿಶಂಕರ ಗುರೂಜಿ ಆಶ್ರಮದಲ್ಲಿ ನಡೆದಿದೆ.

ರವಿಶಂಕರ್‌ಗುರೂಜಿ ಆಶ್ರಮದಲ್ಲಿ ವಾಸವಿರುವ ರೊಮೇಲಾ ಸೇನ್‌ ಎಂಬ ಮಹಿಳೆಗೆ ನಾವು ಆಕ್ಸೀಸ್‌ ಬ್ಯಾಂಕ್‌ ಸಿಬ್ಬಂದಿ ಎಂದು ಹೇಳಿ ಕರೆ ಮಾಡಿದ್ದು, ನಿಮ್ಮ ಬ್ಯಾಂಕ್‌ ಖಾತೆಗೆ ಇ-ಕೆವೈಸಿ ಮಾಡ ಬೇಕು ಎಂದು ಹೇಳಿ ಅವರಿಂದ ಕೆಲ ಮಾಹಿತಿ ಪಡೆ ದಿದ್ದಾರೆ. ಬಳಿಕ ಇವರ ಮೊಬೈಲ್‌ ಫೋನ್‌ಗೆ ಒಟಿಪಿ ಬಂದಿದ್ದು, ಒಟಿಪಿ ನೀಡುವಂತೆ ಕೇಳಿದ್ದಾರೆ.

ಒಟಿಪಿ ನೀಡುತ್ತಿದ್ದಂತೆ ಇವರ ಬ್ಯಾಂಕ್‌ ಖಾತೆಯಲ್ಲಿದ್ದ ಹಣ ಡ್ರಾ ಮಾಡಿದ್ದಾರೆ. ಇದೇ ರೀತಿ 4-5 ಬಾರಿ ವಿವಿಧ ಮೊಬೈಲ್‌ ಸಂಖ್ಯೆಗಳಿಂದ ಕರೆ ಮಾಡಿ ಖಾತೆಯಲ್ಲಿದ್ದ 18.10 ಲಕ್ಷ ರೂ. ಹಣ ಡ್ರಾಮಾಡಿದ್ದಾರೆ. ವಂಚನೆ ತಿಳಿಯುತ್ತಿದ್ದಂತೆ ಮಹಿಳೆ ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.