ಬೆಂಗಳೂರು : ಎಮ್‌ ಡಿ ಎಮ್‌ ಎ ಪೂರೈಸುತ್ತಿದ್ದ ಪೆಡ್ಲರ್ ಗಳನ್ನು ಮೈಸೂರಲ್ಲಿ ಬಂಧಿಸಲಾಗಿದೆ.

ಸೋಮವಾರ ಮೈಸೂರು ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಿರುವ ಪೊಲೀಸರು, 10.30 ಲಕ್ಷ ರೂ. ಮೌಲ್ಯದ 103 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಜಿಯಾವುಲ್ಲಾ, ಜಾವೇದ್ ಅಹ್ಮದ್, ಸೋಹೆಲ್, ನೂಯೇದ್ ಎಂದು ಗುರುತಿಸಲಾಗಿದೆ. ಸಾಕಷ್ಟು ಪ್ಲಾನ್ ಮಾಡಿಯೇ ಕಾರ್ಯಾಚರಣೆ ನಡೆಸಲಾಗಿದೆ.