ಆನೇಕಲ್: ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಪ್ರಜೆಯೊಬ್ಬನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿ, ₹25.63 ಕೋಟಿ ವೆಚ್ಚದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಮ್ಯಾನುಯಲ್‌ ಸೋಫುಲ್‌ ಒಬ್ಡೋಜಿ ಎಂಬುವವನು ಯಲಹಂಕ, ದ್ವಾರಕನಗರ, ನಂದಿ ಹಿಲ್ಸ್‌ ರಸ್ತೆ, ಕೆ.ಆರ್‌.ಪುರ, ಜಿಗಣಿ, ಹೆಬ್ಬಗೋಡಿ ಸಮೀಪದ ಹುಲಿಮಂಗಲ ಸೇರಿದಂತೆ ವಿವಿಧೆಡೆ ಬಾಡಿಗೆಗೆ ಮನೆ ಪಡೆದು ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ. ಹೆಬ್ಬಗೋಡಿ ಪೊಲೀಸರು ದಾಳಿ ನಡೆಸಿ 12ಕೆ.ಜಿ 55 ಗ್ರಾಂ ಎಂಡಿಎಂಎ ಮತ್ತು 275ಗ್ರಾಂ ಕೋಕೆನ್‌ ಅನ್ನು ವಶಕ್ಕೆ ಪಡೆದಿದ್ದಾರೆ.

ಎಲೆಕ್ಟ್ರಾನಿಕ್‌ಸಿಟಿ ಪೊಲೀಸ್‌ ವಿಭಾಗದ ಡಿಸಿಪಿ ಎಂ.ನಾರಾಯಣ್‌, ಎಸಿಪಿ ಸತೀಶ್‌, ಹೆಬ್ಬಗೋಡಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಸೋಮಶೇಖರ್‌, ಪಿಎಸ್‌ಐಗಳಾದ ಶ್ರೀಕಾಂತ್‌, ಮಂಜುನಾಥ್‌, ಮಹಾಂತಗೌಡ, ಸಿಬ್ಬಂದಿ ಅಶೋಕ್‌, ಪ್ರವೀಣ್, ರಾಂಚಂದ್ರ, ಸಂತೋಷ್, ವೇಣುಗೋಪಾಲ್‌, ನಾಗೇಶ್, ಆನಂದ್‌, ದಿಲ್‌ಕುಮಾರ್, ಅಂಬುದಾಸ್‌ ತಂಡದವರು ನೈಜಿರಿಯಾ ಪ್ರಜೆಯನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.