ಬೆಂಗಳೂರು: ವರ್ಕ್ ಫ್ರಮ್ ಹೋಮ್ ಉದ್ಯೋಗದ ಆಫರ್‌ನಲ್ಲಿದ್ದ ಲಾಭದ ಆಸೆಗೆ ಮರುಳಾಗಿ, ಬೆಂಗಳೂರಿನ 55 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ 11.3 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಬೆನ್ಸನ್ ಟೌನ್‌ನಲ್ಲಿ 55 ವರ್ಷದ ಮಹಿಳೆಯೊಬ್ಬರು ಕಳೆದ ಮೂರು ದಿನದ ಹಿಂದೆ ಈ ಸ್ಕ್ಯಾಮ್‌ನಿಂದ ಹಣ ಕಳೆದುಕೊಂಡಿದ್ದಾರೆ. ಪಿಯುಸಿ ಓದುವ ಪುತ್ರನ ಮೊಬೈಲ್‌ಗೆ ವರ್ಕ್ ಫ್ರಮ್ ಹೋಂ ಹೆಸರಲ್ಲಿ ಒಂದು ಮೆಸೇಜ್ ಬಂದಿದೆ.
ಮನೆಯಲ್ಲೇ ಕುಳಿತು ನೀವು ಶಾಪಿಂಗ್ ಆಪ್ ಮೂಲಕ ಹಣ ಗಳಿಸಬಹುದು, ನಾವು ಒಂದಷ್ಟು ಟಾಸ್ಕ್ ಗಳನ್ನ ಕೊಡುತ್ತೇವೆ, ಅದನ್ನ ನೀವು ಪೂರ್ಣ ಮಾಡಿದ್ರೆ ಸಾಕು ಎಂದಿದ್ದಾರೆ. ಜೊತೆಗೆ ಟಾಸ್ಕ್ ಪೂರ್ಣಗೊಳ್ಳಲು ಇಷ್ಟು ಹಣ ಪಾವತಿ ಮಾಡಿದ್ರೆ ನಾವು ಹೆಚ್ಚು ಹಣ ಕೊಡುತ್ತೇವೆ ಎಂದು ಸುಳ್ಳು ರಿವ್ಯೂಗಳನ್ನ ತೋರಿಸಿ ನಂಬಿಸಿದ್ದಾರೆ. ಇದನ್ನ ನೋಡಿದ ಮಹಿಳೆ ಪುತ್ರ ತನ್ನ ತಾಯಿಗೆ ಈ ಬಗ್ಗೆ ಹೇಳಿ ಹಣ ಹಾಕುವಂತೆ ಹೇಳಿದ್ದಾನೆ.
ಮಗನ ಮಾತು ಕೇಳಿ ತಾಯಿ ಕೂಡ ಹಣ ಹಾಕಿದ್ದಾರೆ. ಆರಂಭದಲ್ಲಿ ಕಡಿಮೆ ಮೊತ್ತದಿಂದ ಆರಂಭವಾದ ಹಣ ಮುಂದುವರೆದು ಸಾವಿರಾರು ರೂಪಾಯಿ ಬೇಡಿಕೆಗೆ ತಲುಪಿದೆ. ಒಂದು ಹಂತಕ್ಕೆ ಹಣ ಹೆಚ್ಚಾದಾಗ ಸ್ವಲ್ಪ ಅನುಮಾನಗೊಂಡ ಮಹಿಳೆ, ಹಣ ವಾಪಸ್ ಹಾಕುವಂತೆ ಸ್ಕ್ಯಾಮರ್‌ಗಳಿಗೆ ತಿಳಿಸಿದ್ದಾರೆ. ಆದರೆ ಇದಕ್ಕೊಪ್ಪದ ಕಿರಾತಕರು ಟಾಸ್ಕ್ ಕಂಪ್ಲೀಟ್ ಆದ್ರೆ ಮಾತ್ರ ಹಣ ಕೊಡೋದು ಅಂತ ಹೇಳಿ ನಂಬಿಸಿ ಮತ್ತೆ ಹಣ ಹಾಕಿಸಿಕೊಂಡಿದ್ದಾರೆ.
ಒಟ್ಟು 40 ಸಾವಿರ ಹಣ ಹಾಕಿದ ಬಳಿಕ ಕೊನೆಗೆ ಅನುಮಾನಗೊಂಡ ಮಹಿಳೆ ಹಣ ಹಾಕೋದು ನಿಲ್ಲಿಸಿದ್ದಾರೆ. ಅಷ್ಟರಲ್ಲೇ ಬಹುತೇಕ ತಮ್ಮ ಕೆಲಸ ಪೂರ್ಣಗೊಳಿಸಿದ್ದ ಸ್ಕ್ಯಾಮರ್‌ಗಳು ಪೂರ್ತಿ ಹಣ ಕದ್ದು ಟೋಪಿ ಹಾಕಿದ್ದಾರೆ. ಬಳಿಕ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನೂ ಹಣ ಕಳೆದುಕೊಂಡ ಮಹಿಳೆ ಠಾಣೆಗೆ ದೂರು ನೀಡಿದ್ದಾರೆ.

