ಬೆಂಗಳೂರು: ಕೇಂದ್ರ ಸರ್ಕಾರದ ಮಾತು ಕೇಳದ ಉದ್ಯಮಿಗಳಿಗೆ ಇಡಿ, ಐಟಿ ಬಳಸಿಕೊಂಡು ಕಿರುಕುಳ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಉದ್ಯಮಿಗಳ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡೋದು, ಇಡೀ ರಾಷ್ಟ್ರದಲ್ಲಿ ಈ ಪ್ರವೃತ್ತಿ ಆಗುತ್ತಿದೆ. ಕಳೆದ 10 ವರ್ಷಗಳಿಂದ ಇಡಿ, ಐಟಿ, ಜಿಎಸ್ಟಿಯಿಂದ ಉದ್ಯಮಿಗಳಿಗೆ ಕಿರುಕುಳ ಆಗುತ್ತಿದೆ.
ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದರೆ ಕಿರುಕುಳ ಎಷ್ಟು ಆಗಿರಬಾರದು ನೋಡಿ. ಸಾಮಾನ್ಯ ಜನರಿಗೂ ಇಂತಹ ಕಿರುಕುಳ ಆಗುತ್ತಿದೆ. ಬೇಕಾದ್ರೆ ಸರ್ವೆ ಮಾಡಿ ಗೊತ್ತಾಗುತ್ತದೆ. ಜನರಿಗೆ ತೊಂದರಿಗೆ ಕೊಡಲು ಕೇಂದ್ರದ ಬಳಿ ಹೊಸ ಆಯುಧವೇ ಇದೆ. ಕಿರುಕುಳದ ಬಗ್ಗೆ ನಾನು ಹೇಳುತ್ತಿಲ್ಲ, ಅವರ ಕುಟುಂಬ ಹೇಳುತ್ತಿದೆ. ಇದರ ಬಗ್ಗೆ ತನಿಖೆ ಆಗಲಿ ಎಂದರು.
ರಾಯ್ ಅವರು ಕೆಳ ಮಟ್ಟದಿಂದ ಬೆಳೆದ ವ್ಯಕ್ತಿ. ಅವರು ಯಾಕೆ ಹತಾಶೆ ಆಗಿದ್ದರು. ಯಾಕೆ ಅವರು ಇಂತಹ ನಿರ್ಧಾರ ಮಾಡಿದ್ರು ಎಂಬ ಬಗ್ಗೆ ತನಿಖೆ ಮಾಡಲಿ ಸತ್ಯ ಹೊರಗೆ ಬರಲಿ. ಐಟಿ ಅಧಿಕಾರಿಗಳ ವಿರುದ್ಧವೂ ತನಿಖೆ ಆಗಬೇಕು. ಅವರು ಕ್ರೈಂ ಸೀನ್‌ನಲ್ಲಿ ಇದ್ದರು, ತನಿಖೆ ಆಗಲಿ. ಅಲ್ಲಿ ಇದ್ದವರ ಎಲ್ಲರ ತನಿಖೆ ಆಗಲಿ ಎಂದು ಒತ್ತಾಯಿಸಿದರು.

