ಮಂಗಳೂರು : ಮಂಗಳೂರಿನ ಪುರಭವನದ ಮುಂದಿನ ಭಾಗದಲ್ಲಿರುವ ಪೊಲೀಸ್ ವಸತಿ ಗೃಹಕ್ಕೆ ಕಳ್ಳರು ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದ್ದು ಕೊಂಡು ಹೋಗಿರುವ ಘಟನೆ ನಡೆದಿದೆ.
ಪೊಲೀಸ್ ಲೈನ್ ಎಒನ್ ಬ್ಲಾಕ್ ನಲ್ಲಿರುವ ದ.ಕ ಜಿಲ್ಲೆಯ ಕಂಟ್ರೋಲ್ ರೂಮಲ್ಲಿ ಕೆಲಸ ಮಾಡುತ್ತಿರುವ ಸಮರ್ಥ್ ಎಂಬವರು ರಜೆ ಮೇಲೆ ಊರಿಗೆ ತೆರಳಿದ್ದು ನೆರೆಹೊರೆಯವರು ಹೋದ ಕ್ಷಣದಲ್ಲಿ ಕಳ್ಳರು ಅವರ ಮನೆಯ ಬಾಗಿಲು ಹೊಡೆದು ಒಳ ನುಗ್ಗಿ ಅವರ ಮನೆಯ ಗೋಡ್ರೇಜ್ ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದು ಹಲವು ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡೊಗ್ಗಿದ್ದಾರೆ.
ಈ ಬಗ್ಗೆ ದೂರುದಾರರಿಗೆ ಕರೆ ಮಾಡಿ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದ್ದು ಸ್ಥಳದಲ್ಲಿ ಯಾವುದೇ ತರಹದ ಹಾನಿ ಉಂಟಾಗಿಲ್ಲ. ಸ್ಥಳದಲ್ಲಿ ದಕ್ಷಿಣ ಪೊಲೀಸ್ ಠಾಣೆಯ ಪಿಎಸ್ಐ 1 ಮತ್ತು ಕ್ರೈಂ ಸಿಬ್ಬಂದಿಗಳು ಹಾಜರಿದ್ದು ಮುಂದಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

