ಬೆಂಗಳೂರು: 10 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದು, ಕೇರಳ ಮೂಲದ ಇಬ್ಬರನ್ನ ಸಿಸಿಬಿ ನಾರ್ಕೊಟಿಕ್ಸ್ ತಂಡ ಬಂಧಿಸಿದ ಘಟನೆ ಬಾಗಲೂರಿನ ಪ್ರೆಸ್ಟೀಜ್‌ ಫೈನ್‌ ಬೇಕರಿ ಪಾರ್ಕ್‌ನ ಫ್ಲಾಟ್‌ವೊಂದರಲ್ಲಿ ನಡೆದಿದೆ.

ಅಶ್ವಿನ್ (27), ಮೊಬಿನಾ (25) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಗೆ ಥೈಲ್ಯಾಂಡ್‌ ಮೂಲದ ವಿನ್ಸೆಟ್‌ ಆಗಾಗ್ಗೆ ಫ್ಲೈಟ್‌ನಲ್ಲಿ ಸ್ವಲ್ಪ ಸ್ವಲ್ಪ ಡ್ರಗ್ಸ್‌ ಕಳಿಸಿಕೊಡುತ್ತಿದ್ದನು.

ವಿನ್ಸೆಂಟ್‌ ಸೂಚಿಸುತ್ತಿದ್ದ ಜಾಗದಲ್ಲಿ ಅಶ್ವಿನ್‌ ಮತ್ತು ಮೊಬಿನಾ ಡ್ರಗ್ಸ್‌ ಕೊಟ್ಟು ಬರುತ್ತಿದ್ದರು. ಹೀಗೆ ಪೆಡ್ಲಿಂಗ್‌ ಮಾಡೋದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಇಬ್ಬರು ಈಗ ಪೊಲೀಸರು ಬಂಧಿಸಿದ್ದಾರೆ.