ಬೆಂಗಳೂರು: ಆಟೋ ಚಾಲಕನೊಬ್ಬ ಪ್ರಯಾಣಿಕರನ್ನು ಹೊತ್ತೊಯ್ಯುವಾಗ ರಸ್ತೆಯ ಮೇಲೆ ಗಮನ ಹರಿಸುವ ಬದಲು ಮೊಬೈಲ್‌ನಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ನೋಡುವುದರಲ್ಲಿ ಮಗ್ನನಾಗಿದ್ದ ವಿಡಿಯೋ ಈಗ ವೈರಲ್ ಆಗಿದೆ.

ಎದುರಿಗಿದ್ದ ಟ್ರಕ್ ರಿವರ್ಸ್ ಬರುತ್ತಿದ್ದರೂ ಗಮನಿಸದ ಚಾಲಕ, ಅಪಘಾತದ ಅಂಚಿಗೆ ತಲುಪಿದ್ದ. ಪ್ರಯಾಣಿಕರು ಪದೇ ಪದೇ ಎಚ್ಚರಿಸಿದರೂ, ಮೊಬೈಲ್ ಕೆಳಗಿಳಿಸದ ಚಾಲಕನ ವರ್ತನೆ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಇಡೀ ಘಟನೆಯನ್ನು ಆಟೋದಲ್ಲಿದ್ದ ಪ್ರಯಾಣಿಕರೇ ರೆಕಾರ್ಡ್ ಮಾಡಿದ್ದು, ಸಂಚಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

View this post on Instagram

A post shared by News Karnataka (@newskarnataka)