ಬೆಂಗಳೂರು: ತಮಿಳುನಾಡು ಫಲಿತಾಂಶದಿಂದ ಆಶ್ಚರ್ಯ ಆಗಿದೆ. ಅಲ್ಲಿ ಹೊಸ ಯುಗಾರಂಭವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು ಫಲಿತಾಂಶ ಗ್ರಹಿಸಲು ಆಗಲಿಲ್ಲ. 30-40% ವೋಟ್ ಹೋಗಬಹುದು ಅಂದುಕೊಂಡಿದ್ದೆವು. ಈ ಪ್ರಮಾಣದಲಿ ಬದಲಾವಣೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದರು.

ಕೇರಳದಲ್ಲಿ ನಂಬಿಕೆ ಇತ್ತು. 10 ವರ್ಷ ಆಗಿತ್ತು. ಜನ ಬದಲಾವಣೆ ಬಯಸಿದ್ದಾರೆ. ಇವತ್ತು ದೊಡ್ಡ ಬೆಂಬಲ ಸಿಕ್ಕಿದೆ. ಅಸ್ಸಾಂನಲ್ಲಿ ಪಾರ್ಟಿ ಡ್ಯೂಟಿ ಮಾಡಿದ್ದೇನೆ. ಹೆಚ್ಚು ಸೀಟ್ ನಿರೀಕ್ಷೆ ಇತ್ತು. ಡಿಲಿಮಿಟೇಷನ್ ಕಾರಣ ಆಯ್ತು. ಪಶ್ಚಿಮ ಬಂಗಾಳದಲ್ಲಿ ವೋಟ್ ಡಿಲೀಟ್ ಮಾಡಿದ್ದಾರೆ. ಮೆಷಿನ್ ಕೂಡ ಸಮಸ್ಯೆ ಮಾಡಿದರು. ಗೆಲ್ಲಲೇಬೇಕು ಅನ್ನೋ ಕಾರಣಕ್ಕೆ ಬಿಜೆಪಿ ಏನೇನೋ ಮಾಡಿದರು ಎಂದು ಹೇಳಿದರು.