ಬೆಳಗಾವಿ: ಕಸದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕಿರಾತಕನನ್ನು ಬಂಧಿಸಿ, ಪೊಲೀಸರು 25 ಲಕ್ಷ ರೂ.ಗೂ ಅಧಿಕ ಮೌಲ್ಯದ 900 ಬಾಕ್ಸ್ ಜಪ್ತಿ ಮಾಡಿ, ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿ ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಕ್ಯಾಂಟರ್ ವಾಹನದಲ್ಲಿ ಮದ್ಯ ಸಾಗಿಸುತ್ತಿದ್ದ. ಪೊಲೀಸರನ್ನ ಯಾಮಾರಿಸಲು ಕಸದ ಒಳಗೆ ಮದ್ಯ ಇಟ್ಟು ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೊರಟಿದ್ದನು.

ಈ ವೇಳೆ ಬೆಳಗಾವಿಯ ಶ್ರೀನಗರಕ್ಕೆ ಬರುತ್ತಿದ್ದಂತೆ ಖಚಿತ ಮಾಹಿತಿ ಮೇರೆಗೆ ಸಿಪಿಐ ಬಿ.ಆರ್.ಗಡ್ಡೇಕರ್ ಅವರ ನೇತೃತ್ವದಲ್ಲಿ ಮಾಳಮಾರುತಿ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂಬಂಧ ಮಹಾರಾಷ್ಟ್ರದ ಸಂಸ್ಥೆಗಳ ಚುನಾವಣೆಗೆ ಅಕ್ರಮವಾಗಿ ಗೋವಾದಿಂದ ಮದ್ಯ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು. ಬೆಳಗಾವಿ ಅಬಕಾರಿ, ಬೆಳಗಾವಿ ಎಸ್ಪಿ ವ್ಯಾಪ್ತಿಯ ಪೊಲೀಸರು ಸಾಥ್ ಕೊಡುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಇನ್ನೂ ನಗರ ಪೊಲೀಸ್ ಆಯಕ್ತರು ಭರ್ಜರಿ ಬೇಟೆಯಾಡಿದ ಇನ್ಸ್‌ಪೆಕ್ಟರ್‌ ಬಿ.ಆರ್. ಗಡ್ಡೇಕರ್ ಹಾಗೂ ಮಾಳಮಾರುತಿ ಪೊಲೀಸರಿಗೆ ನಗದು ಬಹುಮಾನ ಘೋಷಿಸಿದ್ದಾರೆ.