ಬಾಗಲಕೋಟೆ : ಬಾಗಲಕೋಟೆ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.

ನ್ಯಾಯಾಧೀಶ ಎನ್ ವಿ ವಿಜಯ ಅವರ ಮೇಲ್ ಗೆ ಮೆಸೇಜ್ ಬಂದ ಹಿನ್ನಲೆ ಕಲಾಪ ಬಿಟ್ಟು ನ್ಯಾಯಾಧೀಶರು ಹೊರಬಂದಿದ್ದಾರೆ.

ಮುಂಜಾಗೃತ ಕ್ರಮವಾಗಿ ನ್ಯಾಯಾಲಯದ ಕಲಾಪ ಬಿಟ್ಟು ವಕೀಲರು ಕಕ್ಷಿದಾರರು ಹೊರಗಡೆ ಬಂದಿದ್ದಾರೆ. ಬಾಂಬ್ ಸ್ಕ್ವಾಡ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

