Showing 20 of 20687 articles • Page 594 of 1035
ನಂತೂರು ಜಂಕ್ಷನ್ ಸಮೀಪವಿದ್ದ 99 ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆದು, ತೆರವು ಮಾಡಲಾಗಿದೆ. ಜಂಕ್ಷನ್ ಸಮೀಪದ ಅಪಾರ್ಟ್ಮೆಂಟ್ ಬಳಿ 2 ಮೀ. ಬಿಟ್ಟು ಭೂಮಿ ಸಮತಟ್ಟು ಮಾಡಲಾಗಿದೆ.
ರೋಗಿ ಇರುವ ಅಂಬ್ಯುಲೆನ್ಸ್ ಗೆ ದಾರಿ ಕೊಡದೆ ರಸ್ತೆಯಲ್ಲಿ ಸತಾಯಿಸಿದ್ದ ಕಾರು ಚಾಲಕನಿಗೆ ಪೊಲೀಸರು ಶಾಕ್ ನೀಡಿದ್ದು, ಬರೋಬ್ಬರಿ 2.5 ಲಕ್ಷ ದಂಡ ವಿಧಿಸಿದ್ದಲ್ಲದೆ ಆತನ ಚಾಲನಾ ಪರವಾನಗಿಯನ್ನೇ ರದ್ದು ಮಾಡಿದ್ದಾರೆ. ಕೇರಳದ ತಿರುವನಂತಪುರದಲ್ಲಿ ಈ ಘಟನೆ ವರದಿಯಾಗಿದ್ದು, ಆರೋಗ್ಯಸ್ಥಿತಿ ಗಂಭೀರವಾಗಿ ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಚಾಲಕ ಹಾರ್ನ್ ಮಾಡಿದ್ದಾರೆ.
ಡ್ರಾ ಸಂದರ್ಭ ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಡ್ರೀಮ್ ಡೀಲ್ ಗ್ರೂಪ್ ಸಂಸ್ಥೆಯಿಂದ ಇಬ್ಬರು ಸಿಬಂದಿಗಳ ಮೇಲೆ ಕೇಸು ದಾಖಲಿಸಲಾಗಿದ್ದು, ಸಂಸ್ಥೆಯಿಂದ ವಜಾಗೊಳಿಸಲಾಗಿದೆ.
ದೊಡ್ಡಣಗುಡ್ಡೆಯ ಚಕ್ರತಿರ್ಥದ ಬಳಿ, ಕೊಟ್ಯಾಂತರ ರೂಪಾಯಿ ಹಣ ಸುರಿದು, ನಿರ್ಮಿಸಿರುವ ಸರಕಾರಿ ಕಟ್ಟಡವೊಂದು ಉದ್ಘಾಟನೆ ಭಾಗ್ಯ ಕಾಣದೆ ಅನಾಥ ಸ್ಥಿತಿಯಲ್ಲಿದ್ದು, ಸಾರ್ವಜನಿಕರ ಹಣವು ವ್ಯರ್ಥವಾಗಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಒಂದೂವರೆ ತಿಂಗಳ ಹಿಂದೆ ವಿವಾಹ ನಿಶ್ಚಿತಾರ್ಥ ಆಗಿದ್ದ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ನ.17ರಂದು ಮೃತಪಟ್ಟಿದ್ದಾರೆ.
ಹಳೆ ಡಯಾನ ವೃತ್ತ, ಕಲ್ಯಾಣ್ ಆಭರಣ ಮಳಿಗೆಯ ಸನಿಹದ ಪಾದಚಾರಿ ರಸ್ತೆಯ ಮೇಲೆ, ಬೃಹತ್ ಗಾತ್ರದ ಕಬ್ಬಿಣದ ಕೊಳವೆ ಹಾಗೂ ಇನ್ನೀತರ ಅದರ ಜೋಡಣಾ ಪರಿಕರಗಳನ್ನು ದಾಸ್ತಾನು ಮಾಡಲಾಗಿದೆ.
ಹೈಕೋರ್ಟ್ ಜಡ್ಜ್ ಶ್ರೀ ವಿಶ್ವಜಿತ್ ಶೆಟ್ಟಿ ಇಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಪೀತಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
‘ಪ್ರಸ್ತುತ ದಿನಗಳಲ್ಲಿ ಪಠ್ಯವನ್ನು ಓದಿ ಜ್ಞಾನಗಳಿಸುವುದರೊಂದಿಗೆ ಪ್ರಾಯೋಗಿಕ ಜ್ಞಾನವೂ ಅಗತ್ಯವೆಂಬುದನ್ನು ನಾವು ಅರಿಯಬೇಕು. ಉದ್ಯೋಗದಲ್ಲಿ ಉನ್ನತಿ ಪಡಯಲು ಅಗತ್ಯ ಕೌಶಲ್ಯಗಳನ್ನು ಕರಗತಗೊಳಿಸುವುದು ಅತ್ಯಗತ್ಯ’ ಎಂದು ಬೆಂಗಳೂರಿನ ಕಿಪ್ಲೋ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಪ್ರೀತಂ ಪೂವಾನಿ ಅಭಿಪ್ರಾಯಪಟ್ಟರು.
400 ಕೆ.ವಿ. ವಿದ್ಯುತ್ ಪ್ರಸರಣ ತಂತಿ ಅಳವಡಿಸಲು ಟವರ್ ನಿರ್ಮಾಣಕ್ಕೆ ಗುತ್ತಿಗೆ ಕಂಪೆನಿ ಅಧಿಕಾರಿಗಳು ಮುಂದಾಗುತ್ತಿದ್ದಂತೆಯೇ ರೈತ ಸಂಘದ ನೇತೃತ್ವದಲ್ಲಿ ಸ್ಥಳೀಯ ಸಂತ್ರಸ್ತ ರೈತರು ಕಾಮಗಾರಿ ನಿಲ್ಲಿಸಿ ಪ್ರತಿಭಟಿಸಿದ ಘಟನೆ ಬಂಟ್ವಾಳ ಕಸ್ಬ ಗ್ರಾಮದ ಅಗ್ರಹಾರ್ ಬಳಿಯ ದರ್ಬಳಕೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಪ್ರಗತಿ ಸ್ಟಡಿ ಸೆಂಟರ್ 18 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಗಳ ಪ್ರಗತಿ ವೈಭವ-2024 ಇಲ್ಲಿನ ಪುರಭವನದಲ್ಲಿ ನವೆಂಬರ್ 17 ರಂದು ನಡೆಯಿತು.
024-2027 ರ ಅವಧಿಗೆ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾಗಿ ಶ್ರೀ ನಂದಗೋಪಾಲ ಶೆಣೈಯವರು ಆಯ್ಕೆಯಾಗಿದ್ದಾರೆ.
ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಹುಡುಗಿಯರ ವಾಲಿಬಾಲ್ ತಂಡವು 2024ರ ನವೆಂಬರ್ 12 ರಿಂದ 14 ರವರೆಗೆ ಹುಬ್ಬಳ್ಳಿಯ ವರೂರಿನ ಎಜಿಎಂ ರೂರಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ 9 ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಗೂಡ್ಸ್ ವಾಹನವೊಂದು ಟಯರ್ ಬ್ಲಾಸ್ಟ್ ಆದ ಪರಿಣಾಮ ಪಲ್ಟಿಯಾಗಿದ್ದು, ಅದರಲ್ಲಿದ್ದ ಮೂರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ, ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ ಆದ ಘಟನೆ ಸಂಭವಿಸಿದೆ.
: ಶ್ರೀಗಂಧ ಮರ ಎಲ್ಲಿದ್ದರೂ ಅದನ್ನು ಕಳ್ಳತನ ಮಾಡುವ ಕಳ್ಳರ ಸಂಖ್ಯೆ ಜಾಸ್ತಿಯಾಗಿದ್ದು, ಕಾಡು ಮಾತ್ರವಲ್ಲದೆ ಊರಿನಲ್ಲಿದ್ದರೂ ಅದನ್ನು ಚಾಣಾಕ್ಷ್ಯತನದಿಂದ ಕಳ್ಳತನ ಮಾಡುತ್ತಿದ್ದು,
ಕರ್ನಾಟಕದಲ್ಲಿ ಹಿಂಗಾರು ಅವಧಿ ಮುಕ್ತಾಯವಾಗಿ ಚಳಿಗಾಲ ಪ್ರಾರಂಭವಾದರೂ, ರಾಜ್ಯದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಮೀನು ಹಿಡಿಯಲು ಹೋದ ತಂದೆ ಹಾಗೂ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ದುರಂತವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಸಮೀಪದ ಬೆನಕನಹೊಳಿ ಬಳಿ ಘಟಪ್ರಭಾ ನದಿ ಹಿನ್ನೀರಿನ ಪ್ರದೇಶದಲ್ಲಿ ನಡೆದಿದೆ.
ಮೃತಪಟ್ಟ ಕೂಲಿ ಕಾರ್ಮಿಕನ ಹೆಣವನ್ನು ರಸ್ತೆ ಬದಿ ಮಾಲೀಕ ಮಲಗಿಸಿ ಹೋದ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ.
ಕುನ್ನಗಳ್ಳಿ ಗ್ರಾಮದ ಆರ್ಟಿಐ ಕಾರ್ಯಕರ್ತ ಲಿಂಗರಾಜು ಅವರು ಎರಡು ಸುಳ್ಳು ಜಾತಿ ತಾರತಮ್ಯ ಪ್ರಕರಣಗಳನ್ನು ದಾಖಲಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಪಡೆದ 50,000 ರೂ.ಗಳ ಪರಿಹಾರವನ್ನು ಹಿಂದಿರುಗಿಸಿದ್ದಾರೆ.
ಹೊಸನಗರದಲ್ಲಿ ಚಿಟ್ಟನಹಳ್ಳಿ ರಸ್ತೆ ಮತ್ತು ಮಲ್ಲಪ್ಪನಹಳ್ಳಿ ರಸ್ತೆ ಬಳಿ ಹೇಮಾವತಿ ನಾಲೆಯ ಸ್ಥಿತಿ ಹದಗೆಟ್ಟಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಾಲುವೆಯ ಡೆಕ್ ಮತ್ತು ತಡೆಗೋಡೆ ಶಿಥಿಲಾವಸ್ಥೆಯಲ್ಲಿದ್ದು, ಕುಸಿಯುವ ಅಪಾಯವಿದೆ ಎಂದು ವರದಿಯಾಗಿದೆ.