Showing 20 of 19289 articles • Page 534 of 965
ಬೆಂಗಳೂರು ಮೂಲದ ಕರ್ನಾಟಕ ಸಂಗೀತ ಗಾಯಕಿ – ಕೊಳಲುವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರು ಈ ವರ್ಷದ ಗ್ರ್ಯಾಮಿ ಪ್ರಶಸ್ತಿಗಳಿಗೆ ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ’ (Best global music performance) ವಿಭಾಗದಲ್ಲಿ ಯುಕೆ ಮೂಲದ ಸಂಗೀತಗಾರ ಜೇಕಬ್ ಕೊಲಿಯರ್ ಅವರ Djesse Vol 4 ಆಲ್ಬಮ್ಮಿನ ‘ಎ ರಾಕ್ ಸಮ್ವೇರ್’ ಹಾಡಿನಲ್ಲಿನ ಗಾಯನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಇದೇ ವಿಭಾಗದಲ್ಲಿ ಪ್ರಸಿದ್ಧ ಸಿತಾರ್ ಕಲಾವಿದೆ ಅನುಷ್ಕಾ ಶಂಕರ್ ಕೂಡ ನಾಮನಿರ್ದೇಶನಗೊಂಡಿದ್ದಾರೆ.
ಗುರುಪುರ ಸೇತುವೆಯಲ್ಲಿ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಕುಡುಕ!
ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಉಪಾಧ್ಯಕ್ಷ ಯ. ಪೂವಪ್ಪ, ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಪುತ್ತೂರು ನಗರ ಅಧ್ಯಕ್ಷ ದಾಮೋದರ ಪಾಠಾಳಿ ಎಡನೀರು ಮಠದಲ್ಲಿ ಸ್ವಾಮೀಜಿಯವರನ್ನು ಭೇಟಿಯಾಗಿ ಕೆಲ ದಿನಗಳ ಹಿಂದೆ ನಡೆದ ಅಹಿತಕರ ಘಟನೆಯ ಬಗ್ಗೆ ಚರ್ಚಿಸಿ,
ಉಡುಪಿಯ ಮಹಾಲಕ್ಷ್ಮೀ ಬ್ಯಾಂಕ್ ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪ ಪ್ರಕರಣ ಇಂದು ದೇವಸ್ಥಾನದ ಅಂಗಳ ತಲುಪಿದೆ.
ಲಯನ್ಸ್ 317 ಸಿ ಹಾಗೂ ರೋಟರಿ ಕ್ಲಬ್ ಜಿಲ್ಲೆ 3182 ಒಳಗೊಂಡ ಲಯನ್ಸ್ ಕ್ಲಬ್ ಅಂಬಲಪಾಡಿ, ಕಲ್ಯಾಣಪುರ, ಸಂತೆಕಟ್ಟೆ, ಉಡುಪಿ ಚೇತನ ಹಾಗೂ ರೋಟರಿ ಸಂಸ್ಥೆ ಅಂಬಲಪಾಡಿ, ಕಲ್ಯಾಣಪುರ, ಉಡುಪಿ ಮಿಡ್ ಟೌನ್ ಹಾಗೂ ಬ್ರಹ್ಮಾವರ ಇವರ ವತಿಯಿಂದ ಮಣಿಪಾಲ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಸಹಯೋಗದೊಂದಿಗೆ ಆಯೋಜಿಸಿದ್ದ “ನನ್ನ ನಾಡು ನನ್ನ ಹಾಡು” ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಉಡುಪಿ ಅಜ್ಜರಕಾಡಿನ ಟೌನ್ ಹಾಲ್ ನಲ್ಲಿ ಶನಿವಾರ ನಡೆಯಿತು.
ದರೋಡೆಕೋರರ ತಂಡವನ್ನು ನಾಗರಿಕರ ಸಹಾಯದಿಂದ ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ ಘಟನೆ ವರ್ಕಾಡಿ ಸಮೀಪದ ಮಜೀರ್ ಪಳ್ಳದಿಂದ ನಡೆದಿದೆ.
ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಶ್ರೀವಿಶ್ವರೂಪದರ್ಶನ ಕಾರ್ಯಕ್ರಮ ನಡೆಯಿತು.
ಮನುಷ್ಯನಿಗೆ ಜೀವಿತಾವಧಿಯಲ್ಲಿ ಉತ್ತಮ ಆರೋಗ್ಯ ಶಿಕ್ಷಣ ಮತ್ತು ಉದ್ಯೋಗ ಅಗತ್ಯ . ಹಾಗಾಗಿ ಅವುಗಳ ಕಡೆ ಗಮನ ಕೊಡುವುದು ವರ್ತಮಾನದ ಅಗತ್ಯ ಎಂದು ಶಾಸಕ ಅಶೋಕ ಕುಮಾರ್ ರೈ ಹೇಳಿದರು.
ತಾಲೂಕಿನ ಬನ್ನೂರು ಶುಭಾಷ್ ನಗರದ 20ನೇ ವಾರ್ಡ್ ನ ಪುರಸಭೆ ಸದಸ್ಯ ಬಿ.ಶಿವಣ್ಣ ಮತ್ತು ಗ್ರಾಮದ ಯಜಮಾನರ ಸಮ್ಮುಖದಲ್ಲಿ ಪ್ರೇಮಿಗಳಿಬ್ಬರ ವಿವಾಹವು ಸರಳವಾಗಿ ನೆರವೇರಿತು.
ತಾಲ್ಲೂಕಿನ ಹೊಳಲು ಗ್ರಾಮದ ಶ್ರೀ ಚಿತ್ತಾನಹಳ್ಳಿ ಪಟ್ಟಲದಮ್ಮ ದೇವಸ್ಥಾನದದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅರಳಿಕಟ್ಟೆ ಮತ್ತು ನಾಗರಕಟ್ಟೆ ರಾಜಗೋಪುರ ಹಾಗೂ 52 ದೇವತೆಗಳ ಶಕ್ತಿಪೀಠ, ಸುಖನಾಶಿ, ಬಲಿಪೀಠ, ಗುರುಡಕಂಬ, ದೀಪಕಂಬ, ಅಮ್ಮನವರ ಪಾದುಕೆ, ಕಂಚಿನತ್ರಿಶೂಲ, ಮಹಾದ್ವಾರ, ಕಲ್ಲಿನ ಜೋಡಿ, ಆನೆಗಳ ಪ್ರತಿಮೆ, ವಿಮಾನ ಗೋಪುರದ ಕಳಸ ಪ್ರತಿಷ್ಠಾಪನಾ ಉದ್ಘಾಟನಾ ಸಮಾರಂಭವು ಸಂಭ್ರಮ ಸಡಗರದಿಂದ ನಡೆಯಿತು.
ಯಸ್ ಬಿ ಗ್ರೂಪ್ಸ್ ಅರ್ಪಿಸುವ ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ನಡಿ ತಯಾರಾಗಲಿರುವ ಪಿಲಿಪಂಜ ಚಲನಚಿತ್ರಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀ ಅನಂತಪ್ರಸಾದ ಅಸ್ರಣ್ಣನವರ ಆಶಿರ್ವಚನದ ಮೂಲಕ ನಡೆಯಿತು.
ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ವಿಜಯದಾಸರ ಆರಾಧನೆ ಉತ್ಸವದಲ್ಲಿ ಮೇಘಾಲಯದ ರಾಜ್ಯಪಾಲರಾದ ಎಚ್ ಸಿ ವಿಜಯಶಂಕರ್ ಭಾಗವಹಿಸಿದರು.
ಪ್ರವೀಣ್ ಫೆರ್ನಾಂಡಿಸ್ ಇವರ ಸನ್ ಶೈನ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆಯ ಚೊಚ್ಚಲ ನಿರ್ಮಾಣದಲ್ಲಿ ತಯಾರಾಗುತ್ತಿರುವ “ವಾಗೊಂಚೊ ಖೆಳ್” ಕೊಂಕಣಿ ಚಲನಚಿತ್ರದ ಮುಹೂರ್ತ ಮತ್ತು ಪೋಸ್ಟರ್ ರಿಲೀಸ್ ಕಾರ್ಯಕ್ರಮ ಶುಕ್ರವಾರ ಸಂಜೆ ಕುಲಶೇಖರದ ಹೋಲಿ ಕ್ರಾಸ್ ಚರ್ಚ್ ಮಿನಿ ಹಾಲ್ ನಲ್ಲಿ ಜರುಗಿತು.
ಅಳಿಯ ಕಾರ್ತಿಕ್ ಗೆ ವಿದೇಶಕ್ಕೆ ಹೋಗುವಂತೆ ಅವರ ತಾಯಿ ತುಂಬಾ ಒತ್ತಾಯ ಮಾಡ್ತಿದ್ರು, ಬೇರೆ ಮನೆ ಮಾಡಿ ಎಂದು ಮೂರು ನಾಲ್ಕು ಸಲ ಹೇಳಿದ್ದಾರೆ.
ಮಣಿಪಾಲ ಸಮೀಪದ ಕೆಳಪರ್ಕಳದಲ್ಲಿ ಗ್ರಾನೈಟ್ ತುಂಬಿದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ನಲ್ಲಿ ಇದ್ದ ಹಲವು ವಾಹನಗಳ ಮೇಲೆ ಬಿದ್ದಿದೆ.
ಚೇರ್ಕಾಡಿ ಗ್ರಾಮದಲ್ಲಿ ಮಹಿಳೆ, ಮಕ್ಕಳಿಗೆ ಕಿರುಕುಳ ನೀಡಿದ್ದ ಅರೋಪ ಕೇಳಿಬಂದಿದ್ದು, ಅಪರಿಚಿತ ವ್ಯಕ್ತಿಯಿಂದ ಕಿರುಕುಳವಾಗುತ್ತಿದೆ ಎಂದು ದೂರಲಾಗಿತ್ತು.
ಮಹಿಳೆಗೆ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಆರೋಪಿ ಠಾಣೆಯಲ್ಲೇ ಮೃತಪಟ್ಟಿದ್ದಾನೆ. ಬ್ರಹ್ಮಾವರ ಪೊಲೀಸ್ ಠಾಣೆಯ ಸೆಲ್ ನ ಬಾತ್ ರೂಮಿನಲ್ಲಿ ಈ ಘಟನೆ ನಡೆದಿದೆ.
ನವ ದೆಹಲಿಯ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಒಫ್ ಇಂಡಿಯಾ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಕೇಂದ್ರ ವಿದ್ಯುತ್ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಪ್ರದಾನ ಮಾಡಿದರು.
ರಾಜ್ಯದ ಜೇನುತುಪ್ಪವನ್ನು ಜನಪ್ರಿಯಗೊಳಿಸಲು, ಗ್ರಾಹಕರಿಗೆ ಗುಣಮಟ್ಟದ ಜೇನುತ್ತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು “ಝೇಂಕಾರ್” ಬ್ರ್ಯಾಂಡ್ ಹೆಸರನ್ನು ಸೂಚಿಸಿ “ಜೀವನೋಲ್ಲಾಸಕ್ಕೆ ಜೇನು’’ ಎಂಬ ಟ್ಯಾಗ್ಲೈನ್ ನೀಡಿ ಲೋಗೋ ಮತ್ತು ಪ್ಯಾಕಿಂಗ್ ವಿನ್ಯಾಸಗಳನ್ನು ಅಭಿವೃದ್ಧಿ ಪಡಿಸಿ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ ಅಧಿಕೃತ ಅನುಮೋದನೆ ಪಡದಿರುತ್ತದೆ.
‘ಮಾನವ ಜನಾಂಗವು ರಕ್ತ ಹಾಗೂ ಜೀವದ ಮಹತ್ವವನ್ನರಿತು ರಕ್ತದಾನವೆಂಬ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳಬೇಕು’ ಎಂದು ಲಯನ್ಸ್ ಜಿಲ್ಲೆ ೩೧೭ ಸಿ ಯ ಜಿಲ್ಲಾ ರಕ್ತದಾನ ಸಂಯೋಜಕ ಲಯನ್ ಆನಂದ ಗಾಣಿಗ ಅಭಿಪ್ರಾಯಪಟ್ಟರು.