Showing 20 of 21657 articles • Page 263 of 1083
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆಯೋಜಿಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಭಾಗವಹಿಸಿ ವಿಶಿಷ್ಟ ಶ್ರೇಣಿ ಹಾಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.
CFAL ಸಂಸ್ಥೆಯ II PU ವಿಭಾಗದ ಇಬ್ಬರು ವಿದ್ಯಾರ್ಥಿಗಳು, ಮ್ರಿನಾಲ್ ಡಿ ಭಟ್ ಮತ್ತು ಅಕ್ಷಿತ್ ರಾಮ್ ಕೆ, ಭಾರತೀಯ ರಾಷ್ಟ್ರೀಯ ಖಗೋಳಶಾಸ್ತ್ರ ಒಲಿಂಪಿಯಾಡ್ (INAO) 2026 ಗೆ ಯಶಸ್ವಿಯಾಗಿ ಆಯ್ಕೆಯಾಗಿದ್ದಾರೆ. ಅವರು ರಾಷ್ಟ್ರೀಯ ಪ್ರಮಾಣಿತ ಖಗೋಳಶಾಸ್ತ್ರ ಪರೀಕ್ಷೆ (NSEA) 2026 ಅಲ್ಲಿ ಉತ್ತೀರ್ಣರಾಗಿದ್ದಾರೆ.
ದೇಶದ ಆರ್ಥಿಕ ವ್ಯವಸ್ಥೆಯನ್ನು ಸಹಕಾರಿ ಕ್ಷೇತ್ರದಿಂದ ಪ್ರಗತಿ ಪಥದತ್ತ ಕೊಂಡೊಯ್ಯಲು ಸಾಧ್ಯವಿದೆ.
ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ನಿಂದ ನಿವೃತ್ತಿ ಘೋಷಿಸಿದ್ದಾರೆ.
ಫೇಸ್ಬುಕ್ನಲ್ಲಿ ಪ್ರಸಾರವಾದ ಆಕ್ಷೇಪಾರ್ಹ ವಿಡಿಯೋದ ವಿರುದ್ಧ ಖ್ಯಾತ ಸಾಮಾಜಿಕ ಕಾರ್ಯಕರ್ತ ಮತ್ತು ವಿಚಾರವಾದಿ ನರೇಂದ್ರ ನಾಯಕ್ ಉರ್ವಾ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದಾರೆ.
ನಗರದ ಪದವಿನಂಗಡಿ ಪ್ರದೇಶದ ಕೊರಗಜ್ಜ ಕಟ್ಟೆ ಮುಂಭಾಗದಲ್ಲಿ ಇಂದು ಆಕಸ್ಮಿಕವಾಗಿ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ಈ ವೇಳೆ ಸ್ಥಳದಲ್ಲೇ ನಿಲ್ಲಿಸಿದ್ದ ಸ್ಕೂಟರ್ ಮೇಲೆ ಮರ ಬಿದ್ದ ಪರಿಣಾಮ ಸ್ಕೂಟರ್ಗೆ ಭಾರೀ ಹಾನಿಯಾಗಿದೆ. ಮರ ಬಿದ್ದ ರಭಸಕ್ಕೆ ಸಮೀಪದಲ್ಲಿದ್ದ ವಿದ್ಯುತ್ ಕಂಬವೂ ಮುರಿದು ಬಿದ್ದಿದೆ.
ಸುಮಾರು 30 ಪ್ರಯಾಣಿಕರಿದ್ದ ಬಸ್ಸನ್ನು ಕಾಡಾನೆಯೊಂದು ಹಿಮ್ಮೆಟ್ಟಿಸಿದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು- ಗೇರುಮಾಳ ನಡುವೆ ನಡೆದಿದೆ.
ತಿರುವು ಪಡೆದುಕೊಳ್ಳುತ್ತಿದ್ದ ಬೈಕ್ ಗೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ವೀರದೇವನಪುರ ಗ್ರಾಮದಲ್ಲಿ ನಡೆದಿದೆ.
ಉಡುಪಿ ಪರ್ಯಾಯ ಮಹೋತ್ಸವ ಯಶಸ್ವಿಯಾಗಿ ಮುಗಿದಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅತ್ಯಂತ ಯಶಸ್ವಿಯಾಗಿ ಪರ್ಯಾಯ ಮಹೋತ್ಸವವನ್ನು ಮಾಡಿದೆ.
ಪ್ರೆಸಿಡೆನ್ಸಿ ಶಾಲೆ ಮತ್ತು ಪಿಯು ಕಾಲೇಜು, ಕೆಲರಾಯಿ, ಮಂಗಳೂರು ಇಲ್ಲಿ ಶನಿವಾರ 2025–26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗಾಗಿ “Tulipa – ಬೇರುಗಳಿಂದ ಪ್ರಕಾಶದವರೆಗೆ ಒಂದು ಪಯಣ” ಎಂಬ ಶೀರ್ಷಿಕೆಯಡಿ ಭವ್ಯವಾದ ವಿದ್ಯಾರ್ಥಿಗಳ ವಿದಾಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತು.
“ಯಾವ ಶಿಕ್ಷಣಕ್ಕೆ ಜನಸಾಧಾರಣರನ್ನು ಜೀವನ ಸಂಗ್ರಾಮಕ್ಕೆ ಸಮರ್ಥರನ್ನಾಗಿ ಮಾಡುವುದಕ್ಕಾಗುವುದಿಲ್ಲವೊ, ಯಾವುದು ಮನುಷ್ಯನಿಗೆ ಚಾರಿತ್ರ್ಯಬಲ, ಸೇವಾತತ್ಪರತೆ, ಸಿಂಹಸಾಹಸಿಕತೆ ಇವುಗಳನ್ನು ಒದಗಿಸುವುದಿಲ್ಲವೊ ಅದು ಶಿಕ್ಷಣ ಎಂಬ ಹೆಸರಿಗೆ ಯೋಗ್ಯವೇನು? ಜೀವನದಲ್ಲಿ ವ್ಯಕ್ತಿ ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳುವ ಸಾಮರ್ಥ್ಯವನ್ನು ಯಾವುದು ನೀಡುವುದೋ ಅದೇ ನಿಜವಾದ ಶಿಕ್ಷಣ” ಎಂದು ಸ್ವಾಮಿ ವಿವೇಕಾನಂದರು ಹೇಳಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಕಣ್ಣೂರು ನಗರ ಹಾಗೂ ಅರ್ಕುಳ ಗ್ರಾಮಗಳನ್ನೊಳಗೊಂಡ ಅರ್ಕುಳ ವಸತಿಯ ವತಿಯಿಂದ 18 ಜನವರಿ 2026, ಆದಿತ್ಯವಾರ ಅರ್ಕುಳದಲ್ಲಿ ಹಿಂದೂ ಸಂಗಮ ಸಮಾವೇಶ ಅತ್ಯಂತ ಶಿಸ್ತಿನೊಂದಿಗೆ ಹಾಗೂ ಅದ್ಧೂರಿಯಾಗಿ ನಡೆಯಿತು.
ಉಡುಪಿ ಪರ್ಯಾಯೋತ್ಸವದ ವೈಭವಮಯ ಸಂಭ್ರಮದ ನಡುವೆ, ಮಿಸ್, ಟೀನ್ & ಮಿಸೆಸ್ ಮಣಿಪಾಲ್ 2025–26 ರ ಮೂರನೇ ಆವೃತ್ತಿಯ ಅಧಿಕೃತ ಪೋಸ್ಟರ್ ಅನ್ನು ಉಡುಪಿ ರಿಲಯನ್ಸ್ ಸ್ಮಾರ್ಟ್ ಬಜಾರ್ನಲ್ಲಿ ಭವ್ಯವಾಗಿ ಬಿಡುಗಡೆ ಮಾಡಲಾಯಿತು.
ಮೈಸೂರಿನಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶ
ಗೂಡ್ಸ್ ವಾಹನ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಕೆ ಆರ್ ಪೇಟೆಯ ಟಿಬಿ ವೃತ್ತದ ಬಳಿ ನಡೆದಿದೆ.
ಬೋಳಾರ, ಹೊಯ್ಗೆ ಬಝಾರ್ ನ ಅಲ್ಬುಕರ್ಕ್ & ಸನ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ ವಾಗಿದ್ದು ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ .
ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸುವ ಪುರುಷ ಭಕ್ತಾದಿಗಳು ಇನ್ನು ಮುಂದೆ ಅಂಗಿ ತೆಗೆದು ಪ್ರವೇಶಿಸಬೇಕಾಗಿದೆ. ನಿನ್ನೆಯಿಂದ ಈ ನಿಯಮವನ್ನು ಪರ್ಯಾಯ ಶೀರೂರು ಮಠ ಕಡ್ಡಾಯಗೊಳಿಸಿದೆ.
ಕಳತ್ತೂರು ಕೊರಂಟಿಕಟ್ಟೆಯಲ್ಲಿ ನವೀಕೃತಗೊಂಡ ಮಸ್ಜಿದ್ ಇ ನೂರು ಮಸೀದಿ ಉದ್ಘಾಟನೆ ಕಾರ್ಯಕ್ರಮದ ಪ್ರಯುಕ್ತ ಸೌಹಾರ್ದ ಸಂಗಮ ಸಮಾರಂಭವನ್ನು ರವಿವಾರ ಮಸೀದಿ ವಠಾರದಲ್ಲಿ ಆಯೋಜಿಸಲಾಗಿತ್ತು.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶಿರೂರು ಮಠದ ಪರ್ಯಾಯ ಮಹೋತ್ಸವ ಆರಂಭವಾಗಿದೆ. ಉಡುಪಿ ಕೃಷ್ಣನ ದರ್ಶನವನ್ನು ಇನ್ನು ಮುಂದೆ ಸುಲಭವಾಗಿ ಮಾಡಬಹುದು.
ನಮ್ಮ ವೈಯುಕ್ತಿಕ ಸಿದ್ದಾಂತಗಳನ್ನು ಬದಿಗಿರಿಸಿ ಪ್ರತಿಯೊಬ್ಬ ವ್ಯಕ್ತಿ ನಮ್ಮವರು ಎಂಬ ಭಾವನೆಯಲ್ಲಿ ಕಂಡಾಗ ದೇಶದಲ್ಲಿ ಐಕ್ಯತೆಯನ್ನು ಕಾಣಲು ಸಾಧ್ಯ ಎಂದು ತೀರ್ಥಹಳ್ಳಿ ಚರ್ಚಿನ ಧರ್ಮಗುರು ವಂ|ವಿರೇಶ್ ಮೋರಾಸ್ ಅಭಿಪ್ರಾಯಪಟ್ಟರು.