ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 7 ರನ್ಗಳ ರೋಚಕ ಜಯ ಸಾಧಿಸಿತು. ಈ ರೋಚಕ ಗೆಲುವಿನ ಬೆನ್ನಲ್ಲೇ ಭಾವುಕರಾದ ರೋಹಿತ್ ಶರ್ಮಾ ಬಿಕ್ಕಿಳಿಸುತ್ತಾ ಕಣ್ಣೀರು ಹಾಕಿದರು.
ಈ ಕಣ್ಣೀರಿನೊಂದಿಗೆ ತನ್ನ ಬಹುಕಾಲದ ಕನಸು ಈಡೇರಿಸಿದ ಕೆನ್ಸಿಂಗ್ಟನ್ ಓವಲ್ ಮೈದಾನದ ಪಿಚ್ಗೆ ನಮಿಸಿದರು. ಅಷ್ಟೇ ಅಲ್ಲದೆ ಪಿಚ್ನಲ್ಲಿನ ಮಣ್ಣು ಹುಲ್ಲನ್ನು ಕಿತ್ತು ತಿನ್ನುವ ಮೂಲಕ ಸ್ಮರಣೀಯ ಗೆಲುವನ್ನು ನೀಡಿದ ಕೆನ್ಸಿಂಗ್ಟನ್ ಮೈದಾನದ ಋಣವನ್ನು ದೇಹಕ್ಕೆ ಸೇರಿಸಿಕೊಂಡರು. ಇದೀಗ ರೋಹಿತ್ ಶರ್ಮಾ ಅವರ ಈ ಭಾವುಕ ಕ್ಷಣಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ನಾನು ಟಿ20 ಸ್ವರೂಪದೊಂದಿಗೆ ವೃತ್ತಿಜೀವನ ಆರಂಭಿಸಿದ್ದೆ. ಇದೀಗ ಈ ಸ್ವರೂಪಕ್ಕೆ ವಿದಾಯ ಹೇಳಲು ಸಕಾಲ. ಹೀಗಾಗಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.
https://x.com/aapkadharm/status/1807294889215848918/video/1