ಚೆನ್ನೈ: ಮಹಿಳಾ ತಂಡ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಭಾರತದ ಹೆಮ್ಮೆಯನ್ನು ಹೆಚ್ಚಿಸಿದೆ. ಭಾರತ ಮಹಿಳಾ ತಂಡ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿದ್ದ ಭಾರತ ದ್ವಿತೀಯ ದಿನದಾಟದಲ್ಲಿ 78 ರನ್ ಕಲೆ ಹಾಕಿ ಒಟ್ಟು 6 ವಿಕೆಟ್ಗೆ 603 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ.
603 ರನ್ ಗಳಿಸುವ ಮೂಲಕ ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಮೊದಲ ದಿನದಾಟಕ್ಕೆ ಅಜೇಯರಾಗಿದ್ದ ನಾಯಕಿ ಹರ್ಮನ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಇಂದು ಆರಂಭಗೊಂಡ ದ್ವಿತೀಯ ದಿನದಾಟದಲ್ಲಿ ಅರ್ಧಶತಕ ಬಾರಿಸಿ ಗಮನಸೆಳೆದರು.
Ad