ಇಸ್ರೇಲ್: ಇರಾನ್ ಕ್ಷಿಪಣಿ ದಾಳಿ ಖಂಡಿಸಿ ಇಸ್ರೇಲ್ ಪ್ರತೀಕಾರ ತೀರಿಸಲು ಮುಂದಾದ ಬೆನ್ನಲ್ಲೇ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನ 8 ಸೈನಿಕರನ್ನು ಹೊಡೆದುರುಳಿಸಿದ್ದು, ಇದೀಗ ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶಪಥವೊಂದನ್ನು ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ನಾವು ಇರಾನ್‌ನ ಆಕ್ಸಿಸ್ ಆಫ್ ಇವಿಲ್ ವಿರುದ್ಧ ಯುದ್ಧಕ್ಕೆ ಸಜ್ಜಾಗಿದ್ದೇವೆ. ಇರಾನ್ ನಮ್ಮನ್ನು ನಾಶಮಾಡಲು ಸಂಚು ಹಾಕಿದೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.

ಇರಾನ್‌ನಲ್ಲಿ ನಿರಂಕುಶ ಆಡಳಿತವನ್ನು ಕೊನೆಗೊಳಿಸಿ, ಅಲ್ಲಿನ ಜನರಿಗೆ ಸ್ವಾತಂತ್ರ್ಯ ನೀಡುತ್ತೇವೆ ಎಂದು ಹೇಳಿದ್ದಾರೆ. ನಾವು ಇರಾನ್‌ನ ಕೈಗೊಂಬೆಗಳನ್ನು ಒಂದೊಂದಾಗಿ ತೊಡೆದುಹಾಕುತ್ತಿದ್ದೇವೆ. ನಮ್ಮ ದೇಶ ಮತ್ತು ಜನರ ರಕ್ಷಣೆಗಾಗಿ ನಾವು ಯಾವುದೇ ಹಂತಕ್ಕೂ ಹೋಗುತ್ತೇವೆ ಎಂದು ಎಚ್ಚರಿಸಿದ್ದಾರೆ.