News Karnataka Kannada
Sunday, May 05 2024
ವಿದೇಶ

ಹಮಾಸ್‌ ಒತ್ತೆಯಾಳುಗಳಾಗಿ ಎಳೆಯ ಮಕ್ಕಳು: ವಿಡಿಯೋ ಬಿಡುಗಡೆ

Young children held hostage by Hamas: Video released
Photo Credit : IANS

ಜರುಸಲೇಂ: ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ನಡುವಿನ ಯುದ್ಧದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಹಮಾಸ್‌ ಒತ್ತೆಯಾಳಾಗಿ ಇಟ್ಟುಕೊಂಡ ಇಸ್ರೇಲಿ ಮಕ್ಕಳ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಹಮಾಸ್ ಗುಂಪು ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು, ಕಿಬ್ಬತ್ಜ್ ‘ಹೋಲಿಟ್’ ಕದನದ ಮಧ್ಯೆ ಹಮಾಸ್ ಹೋರಾಟಗಾರರು ಮಕ್ಕಳ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದಾರೆ ಎಂದು ಕ್ಯಾಷ್ಪನ್ ನೀಡಲಾಗಿದೆ.

ದಕ್ಷಿಣ ಇಸ್ರೇಲ್‌ನಲ್ಲಿರುವ ಕಿಬ್ಬುಟ್ಜ್ ಹೋಲಿಟ್, ಗಾಜಾ ಗಡಿಗೆ ಬಹಳ ಹತ್ತಿರದಲ್ಲಿದೆ. ಹಮಾಸ್ ಉಗ್ರರು ಅಕ್ಟೋಬರ್ 4 ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿ ವೇಳೆಯಲ್ಲಿ ಭೀಕರ ದೌರ್ಜನ್ಯಗಳಿಗೆ ಸಾಕ್ಷಿಯಾಗಿತ್ತು.

ಕಿಬ್ಬುಟ್ಜ್ ಹೋಲಿಟ್ ಮೇಲಿನ ದಾಳಿ ವೇಳೆ 13 ಇಸ್ರೇಲಿಗಳು ಹತ್ಯೆಗೈಯಲಾಗಿತ್ತು. ವೀಡಿಯೋದಲ್ಲಿ ಕಾಣಸಿಗುವ ಮಕ್ಕಳನ್ನು ಇನ್ನೂ ಗುರುತಿಸಲಾಗಿಲ್ಲ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುವಾಗ ಅವರ ಹೆತ್ತವರನ್ನು ಕೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ದಿ ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.

ವಿಡಿಯೋದಲ್ಲಿ ಮಕ್ಕಳು ಅಳುತ್ತಿದ್ದು, ಹಮಾಸ್‌ ಉಗ್ರರು ಅವರನ್ನು ಸಂತೈಸುವ ಚಿತ್ರಣವಿದೆ. ಅಲ್ಲದೆ ಎಳೆಯ ಕೂಸೊಂದನ್ನು ತೊಟ್ಟಿಲಿನಲ್ಲಿ ಹಾಕಿ ತೂಗುವುದು ಕಾಣುತ್ತಿದೆ. ಕೊನೆಗೆ ಮಗುವೊಂದಕ್ಕೆ ಪಾನೀಯ ನೀಡಿ ಆ ಮಗುವಿನಲ್ಲಿ ಬಿಸ್ಮಿಲ್ಲಾ ಎಂದು ಹೇಳುವಂತೆ ಮಾಡುವ ಚಿತ್ರಣವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು