News Karnataka Kannada
Wednesday, May 01 2024
ವಿದೇಶ

ನೀವು ಭಾರತದವರು ಅತ್ಯಂತ ಕೆಟ್ಟವರು: ಮಹಿಳೆಗೆ ನಿಂದಿಸಿದ ಚಾಲಕ

You Indians are the worst: Driver abuses woman
Photo Credit : News Kannada

ಸಿಂಗಾಪುರ: ಸಿಂಗಾಪುರದಲ್ಲಿ ಚೀನಾದ ಕ್ಯಾಬ್ ಚಾಲಕನೊಬ್ಬ ಯುರೇಷಿಯನ್ ಮೂಲದ ಮಹಿಳಾ ಪ್ರಯಾಣಿಕಳನ್ನು ಭಾರತೀಯ ಮಹಿಳೆ ಎಂದು ಭಾವಿಸಿ ಜನಾಂಗೀಯ ನಿಂದನೆ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

ಚೀನಾದ ಚಾಲಕನ ಕಾರಿನಲ್ಲಿ 46 ವರ್ಷದ ಜಾನೆಲ್ಲೆ ಹೋಡೆನ್ ಎಂಬ ಮಹಿಳೆ ತನ್ನ ಒಂಬತ್ತು ವರ್ಷದ ಮಗಳೊಂದಿಗೆ ಪಾಸಿರ್ ರಿಸ್ ಸ್ಟ್ರೀಟ್‌ಗೆ ಪ್ರಯಾಣಿಸುತ್ತಿದ್ದರು.

ಮಹಿಳೆ ಚಾಲಕನಿಗೆ ತನ್ನ ಗಮ್ಯಸ್ಥಾನದ ಅಡ್ರೆಸ್‌ ನೀಡಿದ್ದಾರೆ. ಆದರೆ ಮಹಿಳೆ ನೀಡಿದ ಅಡ್ರೆಸ್‌ಗೆ ಸಾಗುವ ದಾರಿಯಲ್ಲಿ ನಿರ್ಮಾಣ ಕಾಮಗಾರಿಗಾಗಿ ರಸ್ತೆ ಡೈವರ್ಟ್‌ ಮಾಡಲಾಗಿತ್ತು. ರಸ್ತೆ ಡೈವರ್ಟ್‌ ಮಾಡಿದ್ದರಿಂದ ಕೆರಳಿದ ಚಾಲಕ ಆಕೆಯನ್ನು ನೀವು ಭಾರತೀಯರು, ನೀವು ಮೂರ್ಖರು ಎಂದು ಕರೆದಿದ್ದಾನೆ. ಅಲ್ಲದೆ ಕಾರಿನಲ್ಲಿದ್ದ ಹೋಡೆನ್‌ ಪುತ್ರಿ 1.35 ಮೀಟರ್‌ಗಿಂತ ಕಡಿಮೆ ಎತ್ತರವಿರುವುದರಿಂದ “ಕಾನೂನುಬಾಹಿರವಾಗಿ” ಸವಾರಿ ಮಾಡುತ್ತಿದ್ದಾಳೆ ಎಂದು ಕಿರುಚುತ್ತಾನೆ. ಸಿಂಗಾಪುರದ ಎಲ್ಲಾ ವಾಹನಗಳು 1.35 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿರುವ ಪ್ರಯಾಣಿಕರಿಗೆ ಬೂಸ್ಟರ್ ಸೀಟ್‌ ಹೊಂದಿರಬೇಕು ಎಂಬ ನಿಯಮವಿದೆ. ಸಿಂಗಾಪುರದಲ್ಲಿ ಖಾಸಗಿ-ಬಾಡಿಗೆ ಕಾರುಗಳು, ಬುಕ್ಕಿಂಗ್ ಹಂತದಲ್ಲಿ ಬೂಸ್ಟರ್ ಸೀಟ್‌ ಅಗತ್ಯವಿದೆಯೇ ಎಂದು ಸೂಚಿಸಲು ಪ್ರಯಾಣಿಕರನ್ನು ಕೇಳುತ್ತಾರೆ. ಆದರೆ ಮಹಿಳೆ ಈ ಬಗ್ಗೆ ಕೇಳಿರಲಿಲ್ಲ ಎಂದು ಚಾಲಕ ಆರೋಪಿಸುತ್ತಾನೆ. ಡ್ರೈವರ್ ನೀವು ಭಾರತ, ನಾನು ಚೈನೀಸ್ … ನೀವು ಅತ್ಯಂತ ಕೆಟ್ಟ ರೀತಿಯವರು ಎಂದು ನಿಂದಿಸುವುದು ವಿಡಿಯೋದಲ್ಲಿದೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ‘ವೇಕ್ ಅಪ್ ಸಿಂಗಾಪುರದ ಇನ್‌ಸ್ಟಾಗ್ರಾಮ್ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ” ನಾವು ವರ್ಣಭೇದ ನೀತಿ, ತಾರತಮ್ಯ ಅಥವಾ ನಿಂದನೆಯನ್ನು ಸಹಿಸುವುದಿಲ್ಲ. ನಮ್ಮ ತಂಡವು ಈ ವಿಷಯವನ್ನು ತನಿಖೆ ಮಾಡುತ್ತಿದೆ. ಇದನ್ನು ನಮ್ಮ ಗಮನಕ್ಕೆ ತಂದ ಎಲ್ಲರಿಗೂ ಧನ್ಯವಾದಗಳು” ಎಂದು ಕಾಮೆಂಟ್ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು