ಬ್ಯೂನಸ್ ಐರಿಸ್: ವೈಮಾನಿಕ ಪ್ರದರ್ಶನಗಳು ಮೈರೋಮಾಂಚನಗೊಳಿಸುವುದೇನೋ ಸರಿ. ಆದರೆ ಆಯತಪ್ಪಿದರೆ ಆನೆಯೂ ಬೀಳುತ್ತದೆ ಎಂಬ ಮಾತಿನಂತೆ ಸ್ವಲ್ಪ ಅಜಾಗರೂಕತೆ ಮಾಡಿದರೂ ಜೀವವೇ ಹೋಗುತ್ತದೆ. ಅಂತಹುದೇ ದುರ್ಘಟನೆಯೊಂದು ಅರ್ಜೆಂಟೀನಾದಲ್ಲಿ ನಡೆದಿದೆ.
ಅರ್ಜೆಂಟೀನಾದಲ್ಲಿ ನಡೆಯುತ್ತಿದ್ದ ಏರ್ ಶೋದಲ್ಲಿ ಫೈಟರ್ ಜೆಟ್ಟೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ಇಬ್ಬರು ಫೈಟರ್ ಪೈಲಟ್ಗಳು ಸಾವಿಗೀಡಾದ ಘಟನೆ ನಡೆದಿದೆ. ಏರ್ ಶೋದಲ್ಲಿ ವೈಮಾನಿಕ ಪ್ರದರ್ಶನ ನೀಡುತ್ತಿದ್ದ ವೇಳೆ ಈ ಫೈಟರ್ ಜೆಟ್ ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾಗಿದ್ದು, ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ.
ಸ್ಪಾನಿಷ್ ಮಾಧ್ಯಮಗಳ ವರದಿ ಪ್ರಕಾರ, ಅರ್ಜೆಂಟೀನಾದ ಸಾಂಟಾ ಫೆ ಪ್ರಾಂತ್ಯದ ವಿಲ್ಲಾ ಕೆನಾಸ್ನಲ್ಲಿ ನಡೆಯುತ್ತಿದ್ದ ಏರ್ಶೋದಲ್ಲಿ ಈ ದುರಂತ ನಡೆದಿದೆ. ದುರಂತಕ್ಕೂ ಮೊದಲು ಈ ಸೇನಾ ತರಬೇತಿ ಜೆಟ್ ಏರ್ ಶೋ ಭಾಗವಾಗಿ ಬಾನಂಗಳದಲ್ಲಿ ವೈಮಾನಿಕ ಸಾಹಸ ಪ್ರದರ್ಶನ ನೀಡುತ್ತಿತ್ತು.