News Karnataka Kannada
Saturday, May 18 2024
ವಿದೇಶ

ಅಮೆರಿಕದಲ್ಲಿ ಮುಸ್ಲಿಂ ಬಾಲಕನ ಕೊಲೆಗೆ ಸೇಡು: ಐಸಿಸ್ ಉಗ್ರನಿಂದ ಇಬ್ಬರ ಬರ್ಬರ ಹತ್ಯೆ

Two killed by ISIS terrorist in revenge for Muslim boy's murder in US
Photo Credit : News Kannada

ಬ್ರಸೆಲ್ಸ್: ಅಮೆರಿಕದಲ್ಲಿ ಮುಸ್ಲಿಂ ಬಾಲಕನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಐಸಿಸ್ ಉಗ್ರನೊಬ್ಬ ಸೋಮವಾರ ರಾತ್ರಿ(ಅ.16) ಬ್ರಸೆಲ್ಸ್ ನಲ್ಲಿ ಇಬ್ಬರು ಸ್ವೀಡನ್ ಪ್ರಜೆಗಳನ್ನು ಗುಂಡಿಕ್ಕಿ ಕೊಂದಿರುವುದಾಗಿ ವರದಿಯಾಗಿದೆ.

ಗುಂಡು ಹಾರಿಸಿದ ಯುವಕ ತನ್ನನ್ನು ಅಲ್ಲಾಹನ ಸೈನಿಕ ಎಂದು ಬಣ್ಣಿಸಿಕೊಂಡಿದ್ದಾನೆ. ಅಮೆರಿಕದ ಇಲಿನಾಯ್ಸ್ನಲ್ಲಿ 6 ವರ್ಷದ ಮುಸ್ಲಿಂ ಬಾಲಕನ ಕೊಲೆಗೆ ಸೇಡು ತೀರಿಸಿಕೊಂಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ಬೆಲ್ಜಿಯಂನ ಮಾಧ್ಯಮವೊಂದರ ಪ್ರಕಾರ, ಅಲ್ ಗಿಯುಲಾನಿ ಅಮೆರಿಕದ ಮುಸ್ಲಿಂ ಮಗುವಿನ ಹತ್ಯೆಯ ಬಗ್ಗೆ ಎಕ್ಸ್ನಲ್ಲಿ ಬರೆದಿದ್ದಾರೆ, ʼಅವರು (ಜೋ ಬೈಡನ್) ಮುಸ್ಲಿಂ ಆಗಿದ್ದರಿಂದ ಇದನ್ನು ಕ್ರೂರ ಅಪರಾಧ ಎಂದು ಕರೆದರು. ಸತ್ತವನು ಕ್ರಿಶ್ಚಿಯನ್ ಆಗಿದ್ದರೆ ಮತ್ತು ಕೊಲೆಗಾರ ಮುಸ್ಲಿಮ್ ಆಗಿದ್ದರೆ, ಅದನ್ನು ಭಯೋತ್ಪಾದನೆ ಎಂದು ಕರೆಯಲಾಗುತ್ತಿತ್ತು. ಎಂದು ಬರೆದುಕೊಂಡಿದ್ದಾರೆ.

ಯುಇಎಫ್‌ಎ ಯೂರೋ 2024 ಅರ್ಹತಾ ಪಂದ್ಯದಲ್ಲಿ ಬೆಲ್ಜಿಯಂ ಸ್ವೀಡನ್ಗೆ ಆತಿಥ್ಯ ವಹಿಸುತ್ತಿದ್ದ ಬ್ರಸೆಲ್ಸ್ ನಗರದ ಹೃದಯಭಾಗದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಸ್ಕೈ ಸ್ಪೋರ್ಟ್ಸ್ ಪ್ರಕಾರ, ಸಾವನ್ನಪ್ಪಿದವರು ಸ್ವೀಡಿಷ್ ಫುಟ್ಬಾಲ್ ಶರ್ಟ್ಗಳನ್ನು ಧರಿಸಿದ್ದರು. ಶಂಕಿತ ಭಯೋತ್ಪಾದಕ ದಾಳಿಯಿಂದಾಗಿ ಪಂದ್ಯವನ್ನು ಅರ್ಧ ಸಮಯದಲ್ಲಿ ನಿಲ್ಲಿಸಲಾಗಿದೆ ಎಂದು ಯುಇಎಫ್‌ಎ ಎಕ್ಸ್ನಲ್ಲಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು