News Karnataka Kannada
Monday, April 29 2024
ವಿದೇಶ

ಖಲಿಸ್ತಾನಿ ಪ್ರತಿಭಟನೆ ವೇಳೆ ‘ಭಾರತೀಯ ಧ್ವಜ’ ರಕ್ಷಿಸಿದ ವಿದ್ಯಾರ್ಥಿ

Student defends 'Indian flag' during Khalistani protests
Photo Credit : News Kannada

ಲಂಡನ್‌ : ಲಂಡನ್‌ ನಲ್ಲಿ ಖಲಿಸ್ತಾನಿ ಪ್ರತಿಭಟನೆ ವೇಳೆ ಭಾರತೀಯ ಧ್ವಜವನ್ನು ಸುಡಲು ಯತ್ನಸಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ವಿದ್ಯಾರ್ಥಿಯೊಬ್ಬ ಆ ಧ್ವಜವನ್ನು ರಕ್ಷಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ನ ವಿದ್ಯಾರ್ಥಿಯಾಗಿರುವ ಸತ್ಯಂ ಎಂಬಾತ ತ್ರಿವರ್ಣ ಧ್ವಜವನ್ನು ರಕ್ಷಿಸಿದ್ದಾನೆ. ಈ ಬಗ್ಗೆ ಮಾತನಾಡಿರುವ ಆತ, ಭಾರತೀಯ ಧ್ವಜವನ್ನು ಅವಮಾನಿಸುತ್ತಿರುವುದನ್ನ ನಾನು ನೋಡಿದೆ, ಉದ್ದೇಶಪೂರ್ವಕವಾಗಿ ಧ್ವಜದ ಮೇಲೆ ಹೆಜ್ಜೆ ಹಾಕಿದ ಪೊಲೀಸ್ ಮಹಿಳೆಯ ಹಿಂದೆ ಹೋದೆ. ನಾನು ಧ್ವಜವನ್ನ ಎತ್ತಿಕೊಂಡು ದೂರ ಸರಿದೆ.

ಇನ್ನು “ಭಾರತೀಯ ಧ್ವಜವನ್ನ ಈ ರೀತಿ ಅವಮಾನಿಸುವುದನ್ನು ನಾನು ಎಂದಿಗೂ ನೋಡಿಲ್ಲ. ಇದು ಹೇಗೆ ಸಂಭವಿಸಬಹುದು ಎಂದು ನೋಡಿ ನನ್ನ ಆಂತರಿಕ ಆತ್ಮ, ನನ್ನ ಮನಸ್ಸು, ನನ್ನ ಆತ್ಮಸಾಕ್ಷಿ ಆಘಾತಕ್ಕೊಳಗಾಯಿತು. ಅದೇ ನನ್ನನ್ನು ಮುಂದೆ ಸಾಗಲು ಪ್ರೇರೇಪಿಸಿತು. ಹೀಗಾಗಿ ಧೈರ್ಯ ಮಾಡಿ ಮುಂದೆ ಬಂದು ನಮ್ಮ ಧ್ವಜವನ್ನು ರಕ್ಷಿಸಿದ್ದೇನೆ ಎಂದಿದ್ದಾರೆ. ಗಾಂಧಿ ಜಯಂತಿಯ ದಿನದಂದು ಈ ಘಟನೆ ನಡೆದಿದೆ. ಸತ್ಯಂ ತ್ರಿವರ್ಣ ಧ್ವಜ ತೆಗೆದುಕೊಂಡಾಗ ಕೆಲವು ಖಲಿಸ್ತಾನಿಗಳು ಆತನ ವಿರುದ್ಧ ಆಕ್ರೋಶಗೊಂಡು, ಆತನನ್ನ ಶಿಕ್ಷೆಸಲು ಮುಂದಾದರು. ಘಟನಾ ಸ್ಥಳದಲ್ಲಿದ್ದ ಮೆಟ್ರೋಪಾಲಿಟನ್ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿ, ಸತ್ಯಂ ರಕ್ಷಿಸಲು ಸಹಾಯ ಮಾಡಿರುವುದಾಗಿ ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು