ಫ್ನೋಮ್ ಪೆನ್ಹ್, ಸೆಪ್ಟೆಂಬರ್ 23: ಕಾಂಬೋಡಿಯಾದಲ್ಲಿ ದೋಣಿಯೊಂದು ಮುಳುಗಿದ ಪರಿಣಾಮ ಕನಿಷ್ಠ 23 ಚೀನಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಫ್ನೋಮ್ ಪೆನ್ಹ್ ನಲ್ಲಿರುವ ಬೀಜಿಂಗ್ ರಾಯಭಾರ ಕಚೇರಿ ಶುಕ್ರವಾರ ದೃಢಪಡಿಸಿದೆ.
ಗುರುವಾರ ರಾತ್ರಿ ಕಾಂಬೋಡಿಯನ್ ಪೊಲೀಸ್ ಇಲಾಖೆಯಿಂದ ಅಧಿಸೂಚನೆಯನ್ನು ಸ್ವೀಕರಿಸಲಾಗಿದ್ದು, ದೋಣಿಯಲ್ಲಿ ಒಟ್ಟು 40 ಚೀನೀ ಪ್ರಜೆಗಳು ಇದ್ದರು, ಅವರಲ್ಲಿ 18 ಜನರನ್ನು ಅಪಘಾತದ ನಂತರ ರಕ್ಷಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಇದರಲ್ಲಿ ಭಾಗಿಯಾಗಿರುವ ಇಬ್ಬರು ಕಾಂಬೋಡಿಯನ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ರಕ್ಷಿಸಲ್ಪಟ್ಟವರ ಪ್ರಕಾರ, ಸೆಪ್ಟೆಂಬರ್ 11 ರಂದು ಗುವಾಂಗ್ಝೌನಿಂದ ಹೊರಟ ದೋಣಿಯು ಪ್ರಹ್ ಸಿಹಾನೌಕ್ ಪ್ರಾಂತ್ಯದ ನೀರಿಗೆ ಬಂದ ಸ್ವಲ್ಪ ಸಮಯದ ನಂತರ ಸಂಕಷ್ಟಕ್ಕೆ ಸಿಲುಕಿತ್ತು.
ಪ್ರಸ್ತುತ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.