News Karnataka Kannada
Monday, April 29 2024
ವಿದೇಶ

ಪಾಕಿಸ್ತಾನದಲ್ಲಿ ರೆಕಾರ್ಡ್‌ ಬ್ರೇಕ್‌: ದಾಖಲೆ ಕಂಡ ಪೆಟ್ರೋಲ್‌, ಡೀಸೆಲ್ ರೇಟ್

Petrol, diesel prices hit record highs in Pakistan
Photo Credit : News Kannada

ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ರೇಟ್ ಗಗನಮುಖಿಯಾಗಿದ್ದು ಮತ್ತೆ ಸಾರ್ವಕಾಲಿಕ ದಾಖಲೆ ಬರೆದಿದೆ. ಮೊದಲೇ ದಿನಸಿ ಪದಾರ್ಥ, ಮೂಲಭೂತ ಸೌಕರ್ಯಗಳಿಗೆ ಪಾಕ್ ಜನತೆ ಹೋರಾಡುತ್ತಿದ್ದಾರೆ. ದಿನೇ ದಿನೇ ಬೆಲೆ ಏರಿಕೆಯ ಬಿಸಿ ತಟ್ಟುತ್ತಿರುವಾಗಲೇ ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿಯಾಗಿದೆ.

ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡೀಸೆಲ್ ದರ ಫಸ್ಟ್‌ ಟೈಮ್‌ 300 ರೂಪಾಯಿಯ ಗಡಿಯನ್ನು ದಾಟಿದೆ. ಇವತ್ತು ಲೀಟರ್ ಪೆಟ್ರೋಲ್ ದರ 14 ರೂ. 91 ಪೈಸೆ ಮತ್ತು ಡೀಸೆಲ್ ದರ 18 ರೂ. 44 ಪೈಸೆ ಹೆಚ್ಚಾಗಿದೆ. ಈ ದರ ಏರಿಕೆಯ ಹಿನ್ನೆಲೆ ಪೆಟ್ರೋಲ್ ರೇಟ್ ಒಂದು ಲೀಟರ್‌ಗೆ 305.36 ರೂಪಾಯಿ ಆಗಿದೆ. ಡೀಸೆಲ್ ರೇಟ್ 311.84 ಪೈಸೆ ತಲುಪಿದೆ. ಪಾಕಿಸ್ತಾನದ ಇತಿಹಾಸದಲ್ಲೇ ಇಷ್ಟು ರೇಟ್ ಹೆಚ್ಚಾಗಿರೋದು ಇದೇ ಮೊದಲು.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ದರ ಏರಿಕೆಯಾಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಪಾಕ್ ಸರ್ಕಾರ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು