ಪ್ಯಾರಿಸ್: ಫ್ರಾನ್ಸ್ ನ ಲಿಯಾನ್ ನಗರದ ಅಪಾರ್ಟ್ ಮೆಂಟ್ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಕ್ಕಳು ಸೇರಿದಂತೆ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿಯೊನ್ ನ ಉಪನಗರವಾದ ವಾಲ್ಕ್ಸ್-ಎನ್-ವೆಲಿನ್ ನಲ್ಲಿರುವ ಎಂಟು ಅಂತಸ್ತಿನ ಅಪಾರ್ಟ್ ಮೆಂಟ್ ಕಟ್ಟಡದಲ್ಲಿ ಮುಂಜಾನೆ 3.12 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ರೋನ್ ನ ಪ್ರಿಫೆಕ್ಚರ್ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಬೆಂಕಿಯನ್ನು ನಂದಿಸಲು ಸುಮಾರು ೧೭೦ ಅಗ್ನಿಶಾಮಕ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ ಎಂದು ಪ್ರಿಫೆಕ್ಚರ್ ಹೇಳಿದೆ.
ಬೆಂಕಿಯ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.