News Karnataka Kannada
Saturday, May 04 2024
ವಿದೇಶ

ಉಕ್ರೇನ್‌ ಗೆ ಪಾಕ್‌ ನಿಂದ ರಹಸ್ಯ ಶಸ್ತ್ರಾಸ್ತ್ರ: ಈ ಬಗ್ಗೆ ಪಾಕ್‌ ಸರ್ಕಾರ ಹೇಳಿದ್ದೇನು

Pakistan's secret weapons to Ukraine: Here's what the Pakistan government said
Photo Credit : News Kannada

ಇಸ್ಲಾಮಾಬಾದ್: ಪಾಕಿಸ್ತಾನ ಉಕ್ರೇನ್‌ನೊಂದಿಗೆ ರಹಸ್ಯ ಶಸ್ತ್ರಾಸ್ತ್ರ ಒಪ್ಪಂದ ಮಾಡಿಕೊಂಡಿದೆ ಎಂಬ ವರದಿಯನ್ನು ಪಾಕಿಸ್ತಾನ ತಿರಸ್ಕರಿಸಿದ್ದು, ಈ ವರದಿಗಳು “ಆಧಾರರಹಿತ ಮತ್ತು ಕಟ್ಟುಕಥೆ” ಎಂದು ಹೇಳಿದೆ. ರಷ್ಯಾ-ಉಕ್ರೇನ್ ವಿವಾದದಲ್ಲಿ ತಮ್ಮ ದೇಶ ತಟಸ್ಥ ನೀತಿ ಅನುಸರಿಸುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.

ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲು ಪಾಕಿಸ್ತಾನ ಮತ್ತು IMF ನಡುವೆ ಮಾತುಕತೆ ನಡೆಸಲಾಗಿದೆ. ಈ ಮಾತುಕತೆಗಳಿಗೆ ಬೇರೆ ಯಾವುದೇ ಬಣ್ಣವನ್ನು ನೀಡುವುದು ಅಸಹ್ಯಕರ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ.

ಪಾಕಿಸ್ತಾನವು ಉಕ್ರೇನ್ ಮತ್ತು ರಷ್ಯಾ ನಡುವಿನ ವಿವಾದದಲ್ಲಿ ಕಟ್ಟುನಿಟ್ಟಾದ ತಟಸ್ಥ ನೀತಿಯನ್ನು ನಿರ್ವಹಿಸುತ್ತದೆ. ಉಕ್ರೇನ್‌ ಗೆ ಯಾವುದೇ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒದಗಿಸುವುದಿಲ್ಲ ಎಂದು ಅವರು ಹೇಳಿದರು.

ಒಂಬತ್ತು ತಿಂಗಳ ಅವಧಿಗೆ $3bn IMF ಸ್ಟ್ಯಾಂಡ್‌ಬೈ ಅರೇಂಜ್‌ಮೆಂಟ್‌ನ ಅನುಮೋದನೆ ಮತ್ತು ಪ್ರಸರಣಕ್ಕೆ ಪ್ರತಿಯಾಗಿ ಪಾಕಿಸ್ತಾನವು ಅಮೆರಿಕ ಮೂಲಕ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂದು ಅಮೆರಿಕ ಮೂಲದ ಆನ್‌ಲೈನ್ ಪತ್ರಿಕೆ ‘ಇಂಟರ್‌ಸೆಪ್ಟ್’ ವರದಿ ಹೇಳಿದೆ. ಅಲ್ಲದೆ ಪಾಕಿಸ್ತಾನ ಮತ್ತು ಯುಎಸ್ ಎರಡೂ ದೇಶಗಳು ಸಹಿ ಮಾಡಿದ ರಹಸ್ಯ ದಾಖಲೆಗಳನ್ನು ಪ್ರಕಟಿಸಿದೆ. ಈ ಶಸ್ತ್ರಾಸ್ತ್ರ ಮಾರಾಟವು ಉಕ್ರೇನಿಯನ್ ಮಿಲಿಟರಿ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿತ್ತು ಎಂದು ವರದಿ ಹೇಳಿದೆ.

ಪಾಕಿಸ್ತಾನವು ಜುಲೈ 2023 ರ ಸಮಯದಲ್ಲಿ IMF ನೊಂದಿಗೆ ಸ್ಟ್ಯಾಂಡ್‌ಬೈ ಒಪ್ಪಂದವನ್ನು ಮಾಡಿಕೊಂಡಿದೆ. ಅದಕ್ಕೆ ಬದಲಿಯಾಗಿ ಶಸ್ತ್ರಾಸ್ತ್ರ ಒದಗಿಸಲಾಗಿತ್ತು ಎಂದು ವರದಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು