News Karnataka Kannada
Tuesday, May 07 2024
ವಿದೇಶ

ಚಂದ್ರನ ಮೇಲಿನ ಕುಳಿಯಲ್ಲಿ ಬಿದ್ದ ರಷ್ಯಾದ ಲೂನಾ 25: ಚಿತ್ರ ಬಿಡುಗಡೆ ಮಾಡಿದ ನಾಸಾ

NASA releases image of Russia's Luna 25 falling into crater on moon
Photo Credit : News Kannada

ಮಾಸ್ಕೋ: ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್‌ ವಿಫಲವಾಗಿರುವ ರಷ್ಯಾದ ಲೂನಾ 25 ನೌಕೆ ಚಂದ್ರನ ಮೇಲಿನ 10 ಮೀಟರ್‌ ಅಗಲದ ಕುಳಿಗೆ ಅಪ್ಪಳಿಸಿದೆ ಎಂದು ನಾಸಾ ಬಿಡುಗಡೆ ಮಾಡಿದ ಚಿತ್ರಗಳಿಂದ ದೃಢಪಟ್ಟಿದೆ.

47 ವರ್ಷಗಳಲ್ಲಿ ರಷ್ಯಾದ ನಂತರ ಮೊದಲ ಬಾರಿ ಚಂದ್ರನ ಮೇಲೆ ಲೂನಾ-25 ನೌಕೆ ಕಳುಹಿಸಲು ರಷ್ಯಾ ಪ್ರಯತ್ನಿಸಿತ್ತು. ಆದರೆ ಈ ಯತ್ನ ವಿಫಲವಾಗಿತ್ತು. ಇದೀಗ ಅಮೆರಿಕದ ನಾಸಾ ಸಂಸ್ಥೆ ಬಿಡುಗಡೆಗೊಳಿಸಿದ ಚಿತ್ರಗಳು ಈ ಅಂಶಗಳನ್ನು ದೃಢೀಕರಿಸಿವೆ. ಸೋವಿಯತ್‌ ಯೂನಿಯನ್‌ ಪತನದ ಬಳಿಕ ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮ ನನೆಗುದಿಗೆ ಬಿದ್ದಿದ್ದು, ಚಂದ್ರನ ಮೇಲಿನ ಪಯಣವೂ ಆ.19ರಂದು ವಿಫಲವಾಗಿದೆ.

ಯುಎಸ್ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್‌ನ ಲೂನಾರ್ ರೆಕಾನೈಸೆನ್ಸ್ ಆರ್ಬಿಟರ್ (ಎಲ್‌ಆರ್‌ಒ) ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಲ್ಲಿ ಹೊಸ ಕುಳಿಯನ್ನು ಚಿತ್ರಿಸಿದೆ, ಅದು ರಷ್ಯಾದ ಲೂನಾ 25 ಮಿಷನ್‌ ಪತನಗೊಂಡ ಸ್ಥಳ ಎಂದು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು